ಶಿರಸಿ: 2022ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ರಾಜ್ಯಕ್ಕೆ ಸ್ಥಾನಗಳಿಸಿರುವ ವಿದ್ಯಾರ್ಥಿಗಳನ್ನು ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿವತಿಯಿಂದ ಪ್ರೋತ್ಸಾಹ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಲಾಯಿತು.
625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿರುವ ಕುಮಾರ ಚಿರಾಗ ಮಹೇಶ ನಾಯ್ಕ ಶಿರಸಿ, ಕುಮಾರ ತುಷಾರ ಕೇಶವ ಶಾನಭಾಗ ಸಿದ್ದಾಪುರ, ಕುಮಾರಿ ಕನ್ನಿಕಾಪರಮೇಶ್ವರಿ ಹೆಗಡೆ ಬಿಸಲಕೊಪ್ಪ ಹಾಗೂ ಕುಮಾರಿ ಶರ್ಮಿನಾ ಶೇಖ್ ಶಿರಸಿ ಇವರುಗಳ ಜೊತೆಗೆ ರಾಜ್ಯದಲ್ಲಿ ಟಾಪ್ 10 ರ‍್ಯಾಂಕ್ ಗಳಿಸಿರುವ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಲಾ ರೂ.5,000 ಪುರಸ್ಕಾರ ನೀಡುವುದರ ಮೂಲಕ ಸಂಘದ ಕಾರ್ಯಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಇವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಘದ ಆಡಳಿತ ನಿರ್ದೇಶಕರಾದ ಗಣಪತಿ ಶೇಷಗಿರಿ ರಾಯ್ಸದ್ ಕಲ್ಸಳ್ಳಿ, ಶಶಾಂಕ ಶಾಂತಾರಾಮ ಹೆಗಡೆ ಶೀಗೇಹಳ್ಳಿ, ಸಂಘದ ಸಹಾಯಕ ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಸು. ಭಟ್ಟ ಹಾಗೂ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳ ಪಾಲಕರುಗಳು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.