ಶಿರಸಿ: ಶೃಂಗೇರಿಯ ಪ್ರಜ್ಞಾನಂ ಸಂಸ್ಥೆಯಿಂದ ಆಯೋಜಿಸಲ್ಪಟ್ಟಿದ್ದ ಬಾಲ ಸಂಸ್ಕೃತಿ ಶಿಕ್ಷಣ ಎಂಬ ಪರೀಕ್ಷೆಯಲ್ಲಿ ಶಿರಸಿ ಲಯನ್ಸ್ ಶಾಲೆಯ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಸೇರಿ ಒಟ್ಟು 9 ಮಕ್ಕಳು ಪಾಲ್ಗೊಂಡಿದ್ದರು.
ರಾಜೀವಗಾಂಧಿ ಪರಿಸರ ಶೃಂಗೇರಿ ನ್ಯಾಯ ವಿಭಾಗ ಅಧ್ಯಕ್ಷರಾದ ಡಾಕ್ಟರ್ ನವೀನ ಹೊಳ್ಳ ಇವರ ನೇತೃತ್ವದಲ್ಲಿ ಪ್ರಜ್ಞಾನಂ ಎಂಬ ಸಂಸ್ಥೆಯಿಂದ 20 ವರ್ಷದೊಳಗಿನ ಮಕ್ಕಳಿಗೆ ಬಾಲ ಸಂಸ್ಕೃತಿ ಶಿಕ್ಷಣ ಎಂಬ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.ಇದು ನಿತ್ಯ ಕರ್ಮಗಳಿಗೆ ಬೇಕಾಗುವ ಶ್ಲೋಕಗಳನ್ನು ಮತ್ತು ಸಂಸ್ಕೃತಕ್ಕೆ ಸಂಬಂಧಿಸಿದ ಸಾಮಾನ್ಯ ಜ್ಞಾನ (ತತ್ವಾನುಸಂಧಾನವನ್ನು) ಒಳಗೊಂಡಿತ್ತು. ಈ ಪರೀಕ್ಷೆಯಲ್ಲಿ ಕಂಠಪಾಠ, ರಸ ಪ್ರಶ್ನೆಗಳನ್ನು ಆಮೂಲಾಗ್ರವಾಗಿ ಎರಡು ಹಂತಗಳಲ್ಲಿ ಪರೀಕ್ಷಿಸಿದರು.
ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ 9 ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಮೂರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಭಕ್ತಿಶ್ರದ್ಧೆಗಳಿಂದ ಶುದ್ಧವಾಗಿ ವಾಚಿಸಲು ಶಿರಸಿ ಲಯನ್ಸ್ ಶಾಲೆಯ ಸಂಸ್ಕೃತ ಅಧ್ಯಾಪಕಿ ವಿದ್ಯಾವತಿ ಮಂಜುನಾಥ ಭಟ್ ಕಾನಳ್ಳಿ ಹಾಗೂ ಮುಖ್ಯಾಧ್ಯಾಪಕರು ಶಶಾಂಕ್ ಹೆಗಡೆ ಮತ್ತು ಶಿಕ್ಷಕ ವೃಂದದವರ ಮಾರ್ಗದರ್ಶನವಿತ್ತು. .
ಮಕ್ಕಳಿಗೆ ಸಂಸ್ಕೃತಿಯನ್ನು ಕೊಡುವ ಉದ್ದೇಶ ಪ್ರಜ್ಞಾನಮ್ ಸಂಸ್ಥೆಯದ್ದಾಗಿದೆ. ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಅವಿರತವಾಗಿ ಕೆಲಸ ಮಾಡುತ್ತಿದೆ.
ಉತ್ತಮ ಶ್ರೇಣಿಯಲ್ಲಿ ಉತ್ತರ್ಣರಾದಂತಹ ವಿದ್ಯಾರ್ಥಿಗಳ ಹಾಗೂ ಮಾರ್ಗದರ್ಶಿ ಶಿಕ್ಷಕರ ಸಾಧನೆಯನ್ನು ಶಾಲಾ ಆಡಳಿತ ವರ್ಗ, ಶಿಕ್ಷಕವೃಂದ, ಪಾಲಕ ವೃಂದ ಅಭಿನಂದಿಸಿದೆ.