ಕಾರವಾರ: ಇಂಟರನ್ಯಾಷನಲ್ ಸೆಂಟರ್ ತಿರುವನಂತಪುರದಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಸದಾಶಿಗಡದ ಸೆಕ್ರೇಟ್ ಹಾರ್ಟ್ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಜಾಹ್ನವಿ ಗಡಕರ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ.
ಜಾಹ್ನವಿ ಸದಾಶಿವಗಡದ ಜಗದೀಶ ಎಸ್. ಗಡಕರ ಹಾಗೂ ತೃಪ್ತಿ ಗಡಕರ ದಂಪತಿಗಳ ಪುತ್ರಿಯಾಗಿದ್ದಾಳೆ. ಆಕೆಗೆ ಶಿಕ್ಷಕಿ ಗೀತಾ ಗುನಗಿ ತರಬೇತಿ ನೀಡಿದ್ದರು.ಜಾಹ್ನವಿಯ ಸಾಧನೆಗೆ ಶಾಲೆಯವರು ಸೇರಿದಂತೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.