ಕಾರವಾರ: ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶಚೇಶ್ವರ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕಾಗಿ ದೇವಸ್ಥಾನದಲ್ಲಿ ವಿಧಿವಿಧಾನ ಪೂರ್ವಕ ಸಂಕಲ್ಪ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಶೇಜೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಜಯಪ್ರಕಾಶ ಜಿ.ಕೆ., ಪದಾಧಿಕಾರಿಗಳು, ಉಡುಪಿಯ ವಾಸ್ತು ಶಿಲ್ಪಿಸುಬ್ರಹ್ಮಣ್ಯ ಭಟ್, ಗೋಕರ್ಣದ ಹೀರೆ ಭಟ್ಟರು, ಸ್ಥಳೀಯರಾದ ನಾಯ್ಕಸ ಮೀರ ಮುಂತಾದವರು ಉಪಸ್ಥಿತರಿದ್ದರು.
ಸುಮಾರು ನಾಲ್ಕು ವರ್ಷಗಳ ಹಿಂದೆ ದೇವಸ್ಥಾನದ ಬಗ್ಗೆ ಅಷ್ಟಮಂಗಲ ಪ್ರಶ್ನೆ ಮಾಡಿದಾಗ, ದೇವಸ್ಥಾನದ ಕಟ್ಟಡ ಬದಲಾವಣೆ ವಾಸ್ತು ಶಿಲ್ಪಿಗಳಿಂದ ಆಗಬೇಕು ಎನ್ನುವ ಉತ್ತರ ಬಂದಿತ್ತು, ಈ ಹಿನ್ನೆಲೆಯಲ್ಲಿ ಉಡುಪಿಯ ಶಿಲ್ಪಿ ಸುಬ್ರಹ್ಮಣ್ಯ ವಾಸ್ತು ಶಿಲ್ಪಿ ಭಟ್ ಎನ್ನುವವರು ಶನಿವಾರ ಆಗಮಿಸಿದ್ದು, ದೇವಸ್ಥಾನದ ಅಳತೆ ಪಡೆದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಜಯಪ್ರಕಾಶ ಜಿ.ಕೆ. ಅವರು, ಉಡುಪಿಯ ವಾಸ್ತು ಶಿಲ್ಪಿ ಸುಬ್ರಹ್ಮಣ್ಯ ಭಟ್ ಎರಡು ಮೂರು ವಿನ್ಯಾಸಗಳನ್ನು ಸಿದ್ಧಪಡಿಸಿ ನೀಡಬಹುದು. ಇದನ್ನು ದೇವಸ್ಥಾನದ ಆಡಳಿತ ಸಮಿತಿಯ ಮುಂದಿರಿಸಿ, ಸಾರ್ವಜನರಿಕರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು, ಸದ್ಯಕ್ಕೆ ಪ್ರಾಥಮಿಕ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಶೇಜೇಶ್ವರ ದೇವಸ್ಥಾನ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ದೇವಸ್ಥಾನವಾಗಿದ್ದು, ಒಂದೇ ದಿನದಲ್ಲಿ ಯಾರು ಶಚೇಶ್ವರ, ಗೋಕರ್ಣದ ಮಹಾಬಲೇಶ್ವರ, ಧಾರೇಶ್ವರದ ಧಾರಾನಾಥೇಶ್ವರ, ಗುಣವಂತೆಯ ಗುಣವಂತೇಶ್ವರ ಹಾಗೂ ಮುರುಡೇಶ್ವರದ ಮುರ್ಡೇಶ್ವರನ ದರ್ಶನ ಪಡೆಯುತ್ತಾರೋ ಅವರು ಮುಕ್ತಿಯನ್ನು ಹೊಂದುತ್ತಾರೆ. ಎನ್ನುವ ನಂಬಿಕೆ ಶೃದ್ಧಾಳುಗಳಲ್ಲಿ ಇದೆ.