ಕಾರವಾರ: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಖ್ಯಾತ ನಿರ್ಣಾಯಕ ಯಶವಂತ ಬರಡೆ ಅವರು ಕಳೆದ ಎರಡು ದಿನಗಳಿಂದ ಕಾರವಾರದ ಪ್ರವಾಸದಲ್ಲಿದ್ದಾರೆ.
ಕುಟುಂಬ ಸಮೇತವಾಗಿ ಆಗಮಿಸಿರುವ ಅವರು ಕಾರವಾರ ತಾಲೂಕಿನ ದೇವಭಾಗದ ಓಶಿಯನ್ ಡೆಕ್ ಕಾಳಿ ನದಿಯ ಮೂಲಕ ಬೋಟಿಂಗ್ ಮಾಡಿ ನಂದನಗದ್ದಾದ ರಿವರ್ ಗಾರ್ಡನ್ ಕಾಳಿ ನದಿಯ ವಿವಿಧ ಪ್ರದೇಶಗಳಿಗೆ ತೆರಳಿದರು.
ಕಾಳಿ ನದಿ ಪರಿಸರ ಹಾಗೂ ಇಲ್ಲಿನ ಕಾಂಡ್ಲಾ ವನಗಳನ್ನು ವೀಕ್ಷಣೆ ಮಾಡಿ, ಪರಿಸರದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.ಬಳಿಕ ದೇವಭಾಗದ ಓಶಿಯನ್ ಡೆಕ್ ಪ್ರದೇಶದಲ್ಲಿ ಕಾಂಡ್ಲಾ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಹಾಗೂ ಕಾಳಜಿಯನ್ನು ವ್ಯಕ್ತಪಡಿಸಿದರು.
ಕಾರವಾರ ಪ್ರವಾಸ ಕೈಗೊಂಡ ಐಪಿಎಲ್ ನಿರ್ಣಾಯಕ ಯಶವಂತ ಬರಡೆ
