ಕುಮಟಾ: ತಾಲೂಕಿನ ಮೂರೂರಿನ-ಕಲ್ಲಬ್ಬೆಯ ವಿದ್ಯಾನಿಕೇತನದ ಪ್ರಗತಿ ಪದವಿಪೂರ್ವ ಕಾಲೇಜಿನ ನೆಲಮಹಡಿ ಕಟ್ಟಡ ಲೋಕಾರ್ಪಣೆ ಮತ್ತು ಕಾಲೇಜು ಪ್ರಾರಂಭೋತ್ಸವ ಮೇ30 ರಂದು ಮಧ್ಯಾಹ್ನ 2 ಘಂಟೆಗೆ ನಡೆಯಲಿದೆ.
ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸಿ, ದಿವ್ಯ ಸಾನ್ನಿಧ್ಯವಹಿಸಲಿದ್ದಾರೆ. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹನುಮಂತಪ್ಪ ನಿಟ್ಟೂರ, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್. ಎಸ್. ಹೆಗಡೆ ಹರಗಿ ಸಿದ್ದಾಪುರ, ವಿದ್ಯಾನಿಕೇತನ ಸಂಸ್ಥೆಯ ಪೂರ್ವ ಅಧ್ಯಕ್ಷ ವಿನಾಯಕ ಭಟ್ಟ ಭಟ್ರಕೇರಿ, ಡಾಂಡೇಲಿಯ ಬಂಗೂರನಗರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್. ಜಿ. ಹೆಗಡೆ, ಮೂರೂರು ಗ್ರಾಪಂ ಅಧ್ಯಕ್ಷ ರಾಘವೇಂದ್ರ ನಾಯ್ಕ, ಕಲ್ಲಟ್ಟೆ ಗ್ರಾ.ಪಂ ಅಧ್ಯಕ್ಷ ಗಿರಿಯಾ ಗೌಡ ಭಾಗವಹಿಸಲಿದ್ದಾರೆ.