ಭಟ್ಕಳ :ತಾಲೂಕಿನ ಮಾರುಕೇರಿಯ ಹೂತ್ಕಳದ ಶ್ರೀ ಧನ್ವಂತರಿ ವಿಷ್ಣುಮೂರ್ತಿ-ಗಣಪತಿ ದೇವಸ್ಥಾನಕ್ಕೆ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜೀವ ಕುಮಾರ್ ಆಗಮಿಸಿ ಶ್ರೀ ದೇವರ ದರ್ಶನವನ್ನು ಪಡೆದು ನಂತರ ನವಗ್ರಹಪೂರ್ವಕ ಶ್ರೀ ಧನ್ವಂತರಿ ಹೋಮದಲ್ಲಿ ಭಾಗವಹಿಸಿದರು.
ಬೆಳಿಗ್ಗೆ ಮುರ್ಡೇಶ್ವರದಿಂದ ಕುಟುಂಬ ಸಮೇತ ಆಗಮಿಸಿದ್ದ ನ್ಯಾಯಮೂರ್ತಿಗಳು ದೇವಸ್ಥಾನದಲ್ಲಿ ನಡೆಯುತ್ತಿದ್ದ ಹೋಮದಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಅರ್ಚಕ ವೇ.ಮೂ. ಶಂಕರ ಭಟ್ಟ ದೇವರಿಗೆ ವಿಶೇಷ ಅಭಿಷೇಕ, ಪೂಜೆ, ಮಂಗಳಾರತಿಯನ್ನು ಮಾಡಿ ಪ್ರಸಾದ ವಿತರಿಸಿದರು. ದೇವಸ್ಥಾನದಲ್ಲಿ ವ್ಯವಸ್ಥೆಗೊಳಿಸಲಾಗಿದ್ದ ಶ್ರೀ ಧನ್ವಂತರಿ ಹೋಮವನ್ನು ವೈದಿಕರಾದ ಸುಬ್ರಾಯ ಭಟ್ಟ, ಸತೀಶ ಭಟ್ಟ, ವಿನಾಯಕ ಭಟ್ಟ, ನಾರಾಯಣ ಉಪಾಧ್ಯಾಯ, ಯೋಗೇಶ ಹೆಬ್ಬಾರ, ಶಾಂಭವ ಉಪಾಧ್ಯಾಯ, ಮಹೇಶ ಉಪಾಧ್ಯಾಯ, ನಾಗರಾಜ ಹೆಬ್ಬಾರ ಮುಂತಾದವರು ಉಪಸ್ಥಿತರಿದ್ದರು.ನ್ಯಾಯಾಧೀಶರು ಮುರ್ಡೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ ದೇವರ ದರುಶನ ಪಡೆದರು.