• first
    second
    third
    previous arrow
    next arrow
  • ನಿಸ್ವಾರ್ಥ ಸೇವೆಯ ಗೋ ರಕ್ಷಕ ರವಿ ಗೌಳಿ ಯುವಜನತೆಗೆ ಮಾದರಿ

    300x250 AD

    ಶಿರಸಿ; ನಗರದಲ್ಲಿ ಬೀದಿ ದನಗಳ ಸಂಖ್ಯೆ ಹೆಚ್ಚಾಗಿ ಕೆಲವು ದನಕರುಗಳು ಅಪಘಾತಗಳಿಗೆ ಬಲಿಯಾಗುತ್ತಿದ್ದರೆ, ಕೆಲವು ಅಪಘಾತದಲ್ಲಿ ಗಾಯಗೊಂಡು ಅನಾಥವಾಗಿ ನರಕಯಾತನೆಯಲ್ಲೇ ರಸ್ತೆ ಮೇಲೆ ಬದುಕುತ್ತಿದೆ. ಹೀಗೆ ಬದುಕುಳಿದ ದನಕರುಗಳನ್ನು ರಕ್ಷಿಸುವ ಮೂಲಕ ಶಿರಸಿಯ ಮರಾಠಿಕೊಪ್ಪದ ರವಿ ಗೌಳಿ ಗೋ ರಕ್ಷಕ ಎಂದೆ ಜನಪ್ರಿಯರಾಗಿದ್ದಾರೆ.

    ವೃತ್ತಿಯಲ್ಲಿ ಸಿವಿಲ್ ಗುತ್ತಿಗೆದಾರರಾಗಿರುವ ರವಿ ಗೌಳಿ, ಗೋವಿನ ಮೇಲೆ ಅಪಾರ ಪ್ರೀತಿ ಹೊಂದಿದ್ದು, ಗೋವುಗಳು ತೊಂದರೆಗೆ ಸಿಲುಕಿವೆ ಎಂದು ಯಾರೇ ದೂರವಾಣಿ ಕರೆ ಮಾಡಿದರೂ ತಕ್ಷಣಕ್ಕೆ ಸ್ಪಂದಿಸಿ ರಕ್ಷಣೆಗೆ ಮುಂದಾಗುತ್ತಾರೆ. ಕಳೆದ 16 ವರ್ಷಗಳಿಂದ ಗೋ ರಕ್ಷಣೆ ಕಾಯಕದಲ್ಲಿ ತೊಡಗಿಕೊಂಡಿದ್ದು ಯಾವುದೇ ಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥದಿಂದ ಗೋ ರಕ್ಷಣೆ ಮಾಡುತ್ತಿದ್ದಾರೆ.ಅಪಘಾತದಲ್ಲಿ ಗಾಯಗೊಳ್ಳುವ, ಬಾವಿಗೆ ಬಿದ್ದಿರುವ, ಮೂಳೆ ಮುರಿದುಕೊಂಡಿರುವ, ಗಾಯಗೊಂಡು ಕೊಳೆತ ಸ್ಥಿತಿಯಲ್ಲಿರುವ ದನಕರುಗಳನ್ನು ಸಹಾಯಕರೊಂದಿಗೆ ಮನೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡುತ್ತಾರಲ್ಲದೆ ಅವುಗಳು ಗುಣಮುಖವಾಗುವವರೆಗೂ ಚಿಕಿತ್ಸೆ ನೀಡಿ ಅದರ ವಾರಸುದಾರರಿಗೆ ಹಸ್ತಾಂತರಿಸುತ್ತಾರೆ.

    ವಾರಸುದಾರರಿಲ್ಲದ ದನಕರುಗಳನ್ನು ತಾವೇ ಸಾಕುತ್ತಾರೆ. ಇದುವರೆಗೂ ಅವರ ಮನೆಯಲ್ಲಿ 20ಕ್ಕೂ ಹೆಚ್ಚು ಬೀದಿ ದನಕರುಗಳು ರಕ್ಷಣೆ ಪಡೆಯುತ್ತಿವೆ. ಕೆಲವೊಮ್ಮೆನಗರಸಭೆ ಕೂಡಾ ರವಿ ಅವರ ಸಹಾಯ ಕೇಳಿ ಗಾಯಗೊಂಡ ದನಕರುಗಳನ್ನು ಚಿಕಿತ್ಸೆಗೆ ಒಳಪಡಿಸಿದೆ. ಸದ್ಯಕ್ಕೆ ನಗರಸಭೆ ‘ಗೋ ಧಾಮ’ ನಿರ್ಮಿಸಿದ್ದು ಚಿಕಿತ್ಸೆಗಾಗಿ ರವಿ ಅವರನ್ನೆ ಅವಲಂಬಿಸಿದೆ. ರವಿ ಅವರ ಸಾಧನೆ ಹಾಗೂ ಗೋ ರಕ್ಷಣೆಗಾಗಿ ಪಡುತ್ತಿರುವ ಕಷ್ಟ ಅರಿತ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅವರು ಗೋ ಸಾಗಿಸಲು ಆಧುನಿಕ ಮಾದರಿಯ ವಾಹನ ನೀಡಿ ಗೋ ಬಗ್ಗೆ ತಮಗಿರುವ ಕಾಳಜಿ ಮೆರೆದಿದ್ದಾರೆ.

    300x250 AD

    ಶಿರಸಿಯಲ್ಲಿ ದನಕರುಗಳ ವಾರಸುದಾರರ ನಿರ್ಲಕ್ಷದಿಂದಾಗಿ ಹೆಚ್ಚಿನ ದನಕರುಗಳು ಬೀದಿಗೆ ಬಂದು ಅಪಘಾತಕ್ಕೊಳಗಾಗಿ ಸಾವನ್ನಪ್ಪುತ್ತಿವೆ. ಅಪಘಾತದಲ್ಲಿ ಗಾಯಗೊಂಡು ನರಕಯಾತನೆ ಅನುಭವಿಸುತ್ತಿದ್ದ ದನಕರುಗಳನ್ನು ನೋಡಿದರೆ ನನಗೆ ಸಣ್ಣ ವಯಸ್ಸಿನಲ್ಲೆ ಮನಸ್ಸು ಮರುಗುತಿತ್ತು. ನನ್ನ ಕಣ್ಣಿಗೆ ಕಂಡ ದನಕರುಗಳಿಗೆ ಕೈಯಲಾದಷ್ಟು ಚಿಕಿತ್ಸೆ ನೀಡಿ ಆರೈಕೆ ಮಾಡುವುದನ್ನು ಜನರು ನೋಡುತ್ತಿದ್ದರು. ಆದ್ದರಿಂದ ದನಕರುಗಳು ಎಲ್ಲೆ ಅಪಾಯದ ಸ್ಥಿತಿಯಲ್ಲಿದ್ದರೂ ಸಾರ್ವಜನಿಕರು ನನಗೆ ದೂರವಾಣಿ ಕರೆ ಮಾಡುತ್ತಾರೆ. ಕಾಲ ಕ್ರಮೇಣ ಮಾರಾಠಿಕೊಪ್ಪದ ಯುವಕರು ನನ್ನೊಂದಿಗೆ ಕೈ ಜೋಡಿಸಿದ್ದರಿಂದ ಗೋ ರಕ್ಷಣೆ ಸಮಿತಿ ರಚಿಸಲಾಯಿತು. ನಮ್ಮ ಸೇವೆ ಗಮನಿಸಿದ ಶ್ರೀನಿವಾಸ ಹೆಬ್ಬಾರ ಗೋ ರಕ್ಷಣೆಗಾಗಿಯೇ ವಾಹನವೊಂದನ್ನು ಉಚಿತವಾಗಿ ನೀಡಿ ನಮಗೆ ಮರೆಯಲಾಗದ ನೆರವು ನೀಡಿದ್ದಾರೆ. ಸಾರ್ವಜನಿಕರೂ ಕೂಡಾ ಜಾನುವಾರುಗಳನ್ನು ಸಾಕುವಾಗ ಎಚ್ಚರಿಕೆ ವಹಿಸಬೇಕು. ಮೂಖ ಪ್ರಾಣಿಗಳನ್ನು ಇಷ್ಟ ಬಂದಂತೆ ಸಾಕಿ, ಇಷ್ಟ ಬಂದಂತೆ ಬೀದಿಗೆ ಬಿಡುವುದು ಮನುಷ್ಯತ್ವವಲ್ಲ ಎನ್ನುತ್ತಾರೆ ಸಾಧಕ ರವಿ ಗೌಳಿ,

    Share This
    300x250 AD
    300x250 AD
    300x250 AD
    Back to top