ಶಿರಸಿ: ತಾಲೂಕಿನ ಇಸಳೂರನಲ್ಲಿ ನೂತನವಾಗಿ ಆರಂಭಗೊಂಡ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಶ್ರೀಕುಮಾರ್ ಫ್ಯೂಯಲ್ ಪಾಯಿಂಟನ್ನು ಕಾರ್ಮಿಕ ಇಲಾಖೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ರಿಬ್ಬನ್ ಕಟ್ ಮಾಡುವ ಮೂಲಕ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು ಉದ್ಯಮಗಳು ಹೆಚ್ಚೆಚ್ಚು ಆದಾಗ ಆರ್ಥಿಕ ವ್ಯವಸ್ಥೆ ಕೂಡಾ ಸುಧಾರಿಸುತ್ತದೆ. ಅದರೊಂದಿಗೆ ಅನೇಕ ಉದ್ಯೋಗಗಳು ಸೃಷ್ಠಿಯಾಗುತ್ತಿದ್ದು, ಅನೇಕರಿಗೆ ಜೀವನಾಧಾರವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮ ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಗ್ರಾಹಕನ ಬೇಡಿಕೆಯನ್ನು ಸರಿಯಾಗಿ ಗಮನಿಸಿ ಕಾರ್ಯೋನ್ಮುಖರಾದಾಗ ಉದ್ಯಮದಲ್ಲಿ ಯಶಸ್ಸು ಕೂಡಾ ದೊರೆಯುತ್ತದೆ ಎಂದರು.
ಯಲ್ಲಾಪುರ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ ಉದ್ಯಮಕ್ಕೆ ಶುಭ ಹಾರೈಸಿದರು. ಉದ್ಯಮಿ ಹಾಗೂ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ -ಫ್ಯೂಯಲ್ ಪಾಯಿಂಟ್ ಕಚೇರಿ ಉದ್ಘಾಟಿಸಿ ಮಾತನಾಡುತ್ತ ಯಾವುದೇ ಉದ್ಯಮವನ್ನು ಆರಂಭಿಸುವಾಗ ಪ್ರಾಮಾಣಿಕತೆ ಹಾಗೂ ಪರಿಶ್ರಮ ಬಹಳ ಮುಖ್ಯ. ಸಮಾಜದ ಗ್ರಾಹಕರನ್ನು ಲಕ್ಷದಲ್ಲಿಟ್ಟುಕೊಂಡು ಪ್ರತಿ ಹಂತಹಂತದಲ್ಲೂ ಎಚ್ಚರಿಕೆಯಿಂದ ಕಾರ್ಯೋನ್ಮುಖರಾದಾಗ ಯಶಸ್ಸು ಖಂಡಿತಸಿಗುತ್ತದೆ ಎಂದರು.
ವೇದಿಕೆಯಲ್ಲಿ ಇಸಳೂರ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ನರೇಶ್ ಭಟ್ಟ, ಜಿ.ವಿ.ಜೋಶಿ ಕಾನ್ಮೂಲೆ ಮುಂತಾದವರು ಉಪಸ್ಥಿತರಿದ್ದರು.
ಶ್ರೀಕುಮಾರ್ -ಫ್ಯೂಯಲ್ ಪಾಯಿಂಟ್‌ನ ಮುಖ್ಯಸ್ಥ ವೆಂಕಟ್ರಮಣ ಹೆಗಡೆ ಕವಲಕ್ಕಿ ಸ್ವಾಗತಿಸಿ, ಅತಿಥಿಗಳನ್ನು ಶಾಲುಹೊದೆಸುವ ಮೂಲಕ ಗೌರವಿಸಿದರು.