ಕಾರವಾರ: ತಾಲೂಕಿನ ಮಾಜಾಳಿಯಲ್ಲಿರುವ ಸರಕಾರಿ ಇಂಜಿನೀಯರಿಂಗ್ ಕಾಲೇಜಿನ 2021ನೇ ಬ್ಯಾಚಿನ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭವು ಶನಿವಾರ ಕಾಲೇಜಿನಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ಪರಸ್ಪರ ಸಂವಾದ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಯೊಂದಿಗೆ ತಮ್ಮ ಕಲಿಕೆಯ ಬಗೆಗಿನ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಪದವಿ ಪ್ರದಾನ ಸಮಾರಂಭಕ್ಕೆ ಬಂದಿರುವುದು ಮತ್ತೆ ಮರಳಿ ತಾಯಿ ಮನೆಗೆ ಬಂದಂತಾಯಿತು. ಎಂದರು. ಜೊತೆಗೆ ತಮ್ಮ ಇಂಜಿನೀಯರಿಂಗ್ ದಿನಗಳನ್ನ ಮೆಲುಕು ಹಾಕಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾರ್ಯರಾದ ಡಾ.ಬಿ.ಶಾಂತಲಾ, ಪ್ರತಿ ವರ್ಷ ಯುನಿವರ್ಸಿಟಿಯಿಂದ ಪದವಿ ನೀಡಲಾಗುತ್ತಿತ್ತು. ಆದರೆ ಈ ವರ್ಷದಿಂದ ಕಾಲೆಜುಗಳಿಗೆ ನೀಡುತ್ತಿದ್ದು, ನಾವು ವಿದ್ಯಾರ್ಥಿಗಳಿಗೆ ಪದವಿ ನೀಡಿ ಗೌರವಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ 2021ರ ಬ್ಯಾಚಿನ ಒಟ್ಟೂ 141 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ವೇಳೆ ವಿದ್ಯಾರ್ಥಿಗಳು ಸಾಂಪ್ರದಾಯಿಕ ಶಾಲು ತೊಟ್ಟು ಮಿಂಚಿದರು.
ಕಾಲೇಜಿನ ಸಿವಿಲ್ ಇಂಜಿನೀಯರಿಂಗ್ ವಿಭಾಗದ ಎಚ್‌ಒಡಿ ಪಲ್ಲವಿ ಟಿ., ಕಂಪ್ಯೂಟರ್ ಸೈನ್ಸ್ ಎಚ್‌ಒಡಿ ಸೋಮೇಶ್ ಎಚ್., ಇಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್ಸ್ ಎಚ್‌ಒಡಿ ಫಜಲುದ್ದೀನ್ ಡಿ.ಎಂ. ಹಾಗೂ ವಿದ್ಯಾರ್ಥಿಗಳು ಇದ್ದರು.