ಕಾರವಾರ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಲಿಸಿಕಾಕರಣ, ಅನಿಮಿಯಾ ರಕ್ತ ಹೀನತೆ ತಪಾಸಣೆಯ ಕಾರ್ಯಕ್ರಮದ ಪ್ರಗತಿ ಪರಿಶಿಲನಾ ಬಗ್ಗೆ ವಿಡಿಯೋ ಸಂವಾದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ ಮಾತನಾಡಿದರು.
ಜಿಲ್ಲೆಯ ಎಲ್ಲ 12ರಿಂದ 14 ಹಾಗೂ 15ರಿಂದ 17 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಿಸಬೇಕು. ಅಧಿಕಾರಿಗಳು ಯಾವುದೇ ಕಾರಣ ನೀಡದೇ ಲಸಿಕಾಕರಣ ಸಂಪೂರ್ಣವಾಗಿ ನಡೆಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿನ ಒಟ್ಟು 12ರಿಂದ 14 ಹಾಗೂ 15 ರಿಂದ 17 ವರ್ಷದೊಳಗಿನ ಮಕ್ಕಳಲ್ಲಿ ಇದುವರೆಗೂ ಲಸಿಕೆ ಪಡೆಯದೆ ಇರುವ ಮಕ್ಕಳಿಗೆ ಲಸಿಕೆ ನೀಡಬೇಕು ಹಾಗೂ ಮೊದಲನೇ ಡೋಸ್ ಪಡೆದ ಮಕ್ಕಳಿಗೆ ಎರಡನೇ ಡೋಸ ಲಸಿಕಾಕರಣ ಸಂಪೂರ್ಣವಾಗಿ ಆಗಬೇಕು ಎಂದರು.
ಬಿ.ಎ.ಒ ಹಾಗೂ ಟಿ.ಹೆಚ್.ಒ, ಡಿ.ಹೆಚ್.ಒಗಳೊಂದಿಗೆ ಲಸಿಕೆ ಕುರಿತು ಮಾಹಿತಿ ಪಡೆದು ಲಸಿಕಾಕರಣದ ವೇಳೆ ವಾಹನದ ಸಮಸ್ಯೆ ಉಂಟಾದಲ್ಲಿ ಬಾಡಿಗೆ ವಾಹನ ಪಡೆದು ಲಸಿಕಾಕರಣ ಪೂರ್ಣಗೊಳಿಸಬೇಕು ಎಂದರು. ಜಿಲ್ಲೆಯ ಮಹಿಳಾ ಶಿಕ್ಷಕರಿಗೆ, ಶಾಲಾ ಸಿಬ್ಬಂದಿಗಳಿಗೆ ಜೂನ್ 15ರೊಳಗೆ ಡಯಾಬಿಟಿಸ್, ಹೈಪರ್ ಟೆನ್ಸನ್, ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್ ಇತ್ಯಾದಿ ಪರೀಕ್ಷೆಗಳು ಸಂಪೂರ್ಣವಾಗಿ ಆಗಬೇಕು. ಹೆಣ್ಣು ಮಕ್ಕಳಿಗೆ ಹೆಚ್ಬಿ ಪರೀಕ್ಷೆ, ಹಾಗೂ ಎನ್ಸಿಡಿ ಸ್ಕ್ರೀನಿಂಗ್ ಪರೀಕ್ಷೆಗಳನ್ನು 100 ಪ್ರತಿಶತವಾಗಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಈಗಾಗಲೇ ಹೆಣ್ಣು ಮಕ್ಕಳಿಗೆ ಅನಿಮಿಯಾ ರಕ್ತ ಹೀನತೆ ಪರೀಕ್ಷೆ ನಡೆಸುತ್ತಿದ್ದು, ಜೂನ 5 ರೊಳಗೆ ಅನಿಮಿಯಾ ಪರೀಕ್ಷೆ ಪೂರ್ಣಗೊಳಿಸಬೇಕು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಡಿಎಚ್ಒ, ಶಿರಸಿ ಡಿಡಿಪಿಐ, ಕಾರವಾರ ಡಿಡಿಪಿಐ, ಡಿ.ಡಿ.ಡೆಬ್ಲು.ಸಿ.ಡಿ, ಆರ್.ಸಿ.ಹೆಚ್.ಒ, ಡಿ.ಎಸ್.ಒ, ಡಿ.ಡಿಪಿಯು, ಬಿ.ಇ.ಓ, ಎಲ್ಲ ಟಿ.ಹೆಚ್.ಒ ಹಾಗೂ ಪ್ರತಿ ತಾಲೂಕಿನ ಸಿ.ಹೆಚ್.ಒ ಪ್ರತಿನಿಧಿ ಉಪಸ್ಥಿತರಿದ್ದರು.