ಅಂಕೋಲಾ: ತಾಲೂಕಿನ ವಂದಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಳೆ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಹಾಜರಿದ್ದ 25 ಅಧಿಕ ಕೂಲಿಕಾರರೊಂದಿಗೆ ಸೇರಿ ರೋಜಗಾರ್ ದಿವಸ ಆಚರಿಸಲಾಯಿತು.
2021-22 ನೇ ಸಾಲಿನಲ್ಲಿ ದುಡಿಯೋಣ ಬಾ ಮತ್ತು ಜಲಶಕ್ತಿ ಅಭಿಯಾನದಡಿ 8 ಲಕ್ಷ ರೂ ವೆಚ್ಛದಲ್ಲಿ ಬೊಳೆ ಗ್ರಾಮದ ಎನ್‌ಹೆಚ್ 66 ಸಂಕದಿಂದ ರಾಮಚಂದ್ರ ಬುದ್ದು ನಾಯಕ ಅವರ ಜಮೀನಿನವರೆಗಿನ ಹಳ್ಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ. ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಈ ಕಾಮಗಾರಿಯಲ್ಲಿ 25ಕ್ಕೂ ಅಧಿಕ ಮಹಿಳಾ ಹಾಗೂ ಪುರುಷ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ.
ಇದೇ ವೇಳೆ ಬೊಳೆ ಗ್ರಾಮದ ನರೇಗಾ ಕೂಲಿಕಾರ ಮಹಿಳೆ ವಿಮಲಾ ಸಂತೋಷ ಗೌಡ ಮಾತನಾಡಿ, ಗ್ರಾಮೀಣ ಜನರಿಗೆ ಬೇಸಿಗೆ ಕಾಲದಲ್ಲಿ ಯಾವುದೇ ಕೆಲಸ ಕಾರ್ಯಗಳು ಸಿಗುವುದಿಲ್ಲ. ಒಂದುವೇಳೆ ಕೆಲಸ ಸಿಕ್ಕರೂ ಬೆಳಿಗ್ಗೆಯಿಂದ ಸಂಜೆವರೆಗೆ ದುಡಿಯಬೇಕಾದ ಅನಿವಾರ್ಯತೆಯಿದ್ದು, ತುಂಬಾ ಸಂಕಷ್ಟಗಳನ್ನು ಎದುರಿಸುತ್ತಿದ್ದೆವು. ಆದರೆ ಈಗ ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತಿಯವರು ನರೇಗಾ ಯೋಜನೆಯಲ್ಲಿ ಮಣ್ಣು ಸವಕಳಿ, ಜಲ ಮತ್ತು ಅರಣ್ಯ ಸಂರಕ್ಷಣೆ ಉದ್ದೇಶದಿಂದ ದುಡಿಯೋಣ ಬಾ ಹಾಗೂ ಜಲಶಕ್ತಿ ಅಭಿಯಾನದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ನಿರಂತರವಾಗಿ ಸಮಾನ ಕೂಲಿ, ಸಮಾನ ವೇತನ ನೀಡುತ್ತಿದ್ದು, ಈ ಕೂಲಿಯೇ ನಮ್ಮ ಮನೆಯ ಜವಬ್ದಾರಿ ಹಾಗೂ ಮಕ್ಕಳ ವಿದ್ಯಾಭ್ಯಾಸದ ಖರ್ಚು ವೆಚ್ಚಕ್ಕೆ ಆಧಾರವಾಗಿದೆ. ಮುಂಬರುವ ದಿನಗಳಲ್ಲೂ ನರೇಗಾ ಕಾಮಗಾರಿಗಳಲ್ಲಿ ಹೀಗೆ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಗಳು ಸಿಗುವಂತಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಾ ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಉದ್ಯೋಗ ಚೀಟಿಯೊಂದಕ್ಕೆ 100 ದಿನಗಳ ಕೂಲಿ ನೀಡಲಾಗುತ್ತಿದೆ. 309 ರೂ ಕೂಲಿ ಹಾಗೂ 10ರೂ ಸಾಮಗ್ರಿ ವೆಚ್ಚ ಸೇರಿ ಒಟ್ಟು 319 ರೂ ಕೂಲಿ ನಿಗದಿಯಾಗಿದೆ. ಅಲ್ಲದೇ ನರೇಗಾ ಕೂಲಿಕಾರರು ಕೆಲಸದ ವೇಳೆ ಇಲ್ಲವೇ ಕಾಮಗಾರಿ ಸ್ಥಳದಲ್ಲಿ ಅವಘಡ ಸಂಭವಿಸಿ ಸಾವನ್ನಪ್ಪಿದರೆ ಹಾಗೂ ಶಾಶ್ವತ ಅಂಗವೈಕಲ್ಯತೆ ಹೊಂದಿದರೆ ಅಂತಹವರಿಗೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ 2 ಲಕ್ಷ ರೂ. ಪರಿಹಾರ ಸಿಗಲಿದೆ. 2021 ಎಪ್ರಿಲ್ 1ರ ನಂತರದ ಎಲ್ಲಾ ಪ್ರಕರಣಗಳಿಗೆ ಈ ಆದೇಶ ಅನ್ವಯಿಸಲಿದ್ದು, ಗ್ರಾಮೀಣ ಭಾಗದ ಪ್ರತಿಯೊಬ್ಬರೂ ಉದ್ಯೋಗ ಚೀಟಿ ಪಡೆದು ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೆಲಸ ಮಾಡುವುದರ ಮೂಲಕ ನರೇಗಾ ಯೋಜನೆಯಡಿ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಂತರದಲ್ಲಿ ಗ್ರಾಮ ಪಂಚಾಯತಿಗೆ ಭೆಟಿ ನೀಡಿ, ನರೇಗಾ ಕಾಮಗಾರಿಗಳ ಕಡತ ಹಾಗೂ 1 ರಿಂದ 7 ರವರೆಗಿನ ವಹಿಗಳನ್ನು ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಸಿಬ್ಬಂದಿ ಪರಶುರಾಮ, ಮಂಜು ನಾಯಕ, ಬಿಎಫ್‌ಟಿ ಮಹೇಶ ನಾಯ್ಕ್, ಗುತ್ತಿಗೆದಾರ ದೇವರಾಯ ಪಕ್ಕಿರಪ್ಪ ತುಮ್ಮನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಲೂಕಾ ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಉದ್ಯೋಗ ಚೀಟಿಯೊಂದಕ್ಕೆ 100 ದಿನಗಳ ಕೂಲಿ ನೀಡಲಾಗುತ್ತಿದೆ. 309 ರೂ ಕೂಲಿ ಹಾಗೂ 10ರೂ ಸಾಮಗ್ರಿ ವೆಚ್ಚ ಸೇರಿ ಒಟ್ಟು 319 ರೂ ಕೂಲಿ ನಿಗದಿಯಾಗಿದೆ. ಅಲ್ಲದೇ ನರೇಗಾ ಕೂಲಿಕಾರರು ಕೆಲಸದ ವೇಳೆ ಇಲ್ಲವೇ ಕಾಮಗಾರಿ ಸ್ಥಳದಲ್ಲಿ ಅವಘಡ ಸಂಭವಿಸಿ ಸಾವನ್ನಪ್ಪಿದರೆ ಹಾಗೂ ಶಾಶ್ವತ ಅಂಗವೈಕಲ್ಯತೆ ಹೊಂದಿದರೆ ಅಂತಹವರಿಗೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ 2 ಲಕ್ಷ ರೂ. ಪರಿಹಾರ ಸಿಗಲಿದೆ. 2021 ಎಪ್ರಿಲ್ 1ರ ನಂತರದ ಎಲ್ಲಾ ಪ್ರಕರಣಗಳಿಗೆ ಈ ಆದೇಶ ಅನ್ವಯಿಸಲಿದ್ದು, ಗ್ರಾಮೀಣ ಭಾಗದ ಪ್ರತಿಯೊಬ್ಬರೂ ಉದ್ಯೋಗ ಚೀಟಿ ಪಡೆದು ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೆಲಸ ಮಾಡುವುದರ ಮೂಲಕ ನರೇಗಾ ಯೋಜನೆಯಡಿ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಂತರದಲ್ಲಿ ಗ್ರಾಮ ಪಂಚಾಯತಿಗೆ ಭೆಟಿ ನೀಡಿ, ನರೇಗಾ ಕಾಮಗಾರಿಗಳ ಕಡತ ಹಾಗೂ 1 ರಿಂದ 7 ರವರೆಗಿನ ವಹಿಗಳನ್ನು ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಸಿಬ್ಬಂದಿ ಪರಶುರಾಮ, ಮಂಜು ನಾಯಕ, ಬಿಎಫ್‌ಟಿ ಮಹೇಶ ನಾಯ್ಕ್, ಗುತ್ತಿಗೆದಾರ ದೇವರಾಯ ಪಕ್ಕಿರಪ್ಪ ತುಮ್ಮನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.