
ಯಲ್ಲಾಪುರ: ವರುಣಾರ್ಭಟಕ್ಕೆ ಯಲ್ಲಾಪುರ ತಾಲೂಕಿನ ವಿವಿಧೆಡೆ ಅಪಾರ ಹಾನಿಉಂಟಾಗಿದ್ದು ಪ್ರವಾಹಕ್ಕೆ ಸಿಲುಕಿ ಜನ ಕಷ್ಟದಲ್ಲಿದ್ದಾರೆ.
ಎಡಬಿಡದೇ ಸುರಿಯುತ್ತಿರುವ ಮಳೆಯ ರಭಸಕ್ಕೆ ಕಳಚೆ ಸಮೀಪ ಮನೆಯೊಂದರ ಬಳಿ ಭೂಕುಸಿತ ಉಂಟಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಐದು ಜನ ಪ್ರಾಣಾಪಾಯದಿಂದ ಪಾರಾಗಿದ್ದು ಮೃತಪಟ್ಟ ಮಹಿಳೆಯನ್ನು ದೇವಕಿ ನಾರಾಯಣ ಗಾಂವ್ಕಾರ್ ಎಂದು ಗುರುತಿಸಲಾಗಿದೆ.
ಹಾಸಣಗಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಆಲವಾಡದ ಕಬ್ಬಿನಗದ್ದೆಯ 43 ವರ್ಷದ ವ್ಯಕ್ತಿಯೊಬ್ಬರು ನದಿಯಲ್ಲಿ ಕೊಚ್ಚಿಹೋಗಿದ್ದಾರೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳಿಂದ ತಿಳಿದು ಬಂದಿದೆ. ತುಂಬಿ ಹರಿಯುತ್ತಿದ್ದ ಸೇತುವೆ ದಾಟುತ್ತಿರುವ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ ಎಂದು ಹಾಸಣಗಿ ಪಿಡಿಓ ಮಾಹಿತಿ ನೀಡಿದ್ದಾರೆ.
ಇನ್ನು ಗುಳ್ಳಾಪುರ ಸೇತುವೆ ಕುಸಿದು ಶೇವ್ಕಾರ್, ಹಳವಳ್ಳಿ , ಕೋನಾಳ, ಕಲ್ಲೇಶ್ವರ ಸಂಪರ್ಕ ಕಡಿತಗೊಂಡಿದೆ.