ಭಟ್ಕಳ: ನೀರು ಹರಿಯುವ ಕಾಲುವೆಗೆ ಬಿದ್ದು ಸಾವನ್ನಪ್ಪಿದ ಬಾಲಕನ ಕುಟುಂಬಕ್ಕೆ ಶಾಸಕ ಸುನೀಲ ನಾಯ್ಕ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಮಂಜೂರಿ ಮಾಡಿಸಿ ಅದರ ಪತ್ರಿಯನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.
ಮೇ 20ರಂದು ಸುರಿದ ಭಾರಿ ಮಳೆಗೆ ಬೆಂಗ್ರೆ-2 ಪಡುಶಿರಾಲಿಯಲ್ಲಿ ವಿಜೇತ ಗಣಪತಿ ನಾಯ್ಕ ಎಂಬ 4 ವರ್ಷದ ಬಾಲಕ ಮನೆಯ ಹಿಂಬದಿಯಲ್ಲಿ ಆಟವಾಡುತ್ತಿದ್ದ ವೇಳೆ ಅಲ್ಲೇ ಪಕ್ಕದಲ್ಲಿರುವ ಕಾಲುವೆಗೆ ಬಿದ್ದು ಸಾವನ್ನಪ್ಪಿದ್ದನು.
ಅಂದು ಶಾಸಕ ಸುನೀಲ ನಾಯ್ಕ ಶವಾಗರಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನವನ್ನು ಹೇಳುವುದರೊಂದಿಗೆ ಪರಿಹಾರಕ್ಕಾಗಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ಕುಟುಂಬಕ್ಕೆ ಪರಿಹಾರವನ್ನು ಮಂಜೂರು ಮಾಡಿಸಿ ಆದೇಶ ಪ್ರತಿಯನ್ನು ಹಸ್ತಾಂತರಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, ಮಹೇಶ ನಾಯ್ಕ ಮುಂತಾದವರು ಇದ್ದರು.