ಯಲ್ಲಾಪುರ: ಪಟ್ಟಣದ ಬಸ್ ನಿಲ್ದಾಣ, ಕಾಲೇಜು ರಸ್ತೆ, ಕಾಳಮ್ಮನಗರ ಹಾಗೂ ಉದ್ಯಮನಗರಗಳಲ್ಲಿ ಆರೋಗ್ಯ, ಕಂದಾಯ ಹಾಗೂ ಪೊಲೀಸ್ ಇಲಾಖೆಯವರು ಶುಕ್ರವಾರ ತಂಬಾಕು ಮಾರಾಟಗಾರರ ಮೇಲೆ ದಾಳಿ ನಡೆಸಿ ದಂಡ ವಿಧಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್, ಪೊಲೀಸ್ ಉಪನಿರೀಕ್ಷಕ ಮಂಜುನಾಥ ಗೌಡರ್, ಉಪ ತಹಶೀಲ್ದಾರ ಎಚ್.ಎನ್.ರಾಘವೇಂದ್ರ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್ಟ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ತಾಳಿಕೋಟೆ ದಾಳಿ ನಡೆಸಿ, ಒಟ್ಟು 13 ಅಂಗಡಿಕಾರರು ಅಂಗಡಿಕಾರ ವಿರುದ್ಧ ಸೆಕ್ಷನ್ 4 ಮತ್ತು 6ರ ಅಡಿಯಲ್ಲಿ ಪ್ರಕರಣ ದಾಖಲಿಸಿ 5300 ರೂಪಾಯಿ ದಂಡ ವಿಧಿಸಿದರು.