• first
    second
    third
    previous arrow
    next arrow
  • ಕೋಣಗಳ ಸಾಗಾಟ:ಮೂವರ ಬಂಧನ,ಓರ್ವ ನಾಪತ್ತೆ

    300x250 AD

    ಭಟ್ಕಳ: ಮಹೀಂದ್ರ ಬೊಲೆರೋದಲ್ಲಿ ಕೋಣಗಳನ್ನು ಸಾಗಾಟ ಮಾಡುವ ವೇಳೆ ಗೊರಟೆ ಹೊಳೆಗದ್ದೆ ಬಳಿ ಪೊಲೀಸರು ತಡೆದು ಮೂವರು ಆರೋಪಿಗಳನ್ನು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ.

    ಮಾದೇವ ನಾಯ್ಕ, ಇಬ್ರಾಹಿಂ ಖಲೀಲ್, ಇಬ್ರಾಹಿಂ ಜಬಾಲಿ ಬಂಧಿತ ಆರೋಪಿಗಳು. ಚಾಲಕ ಮಂಜು ನಾಯ್ಕ ಪರಾರಿಯಾಗಿದ್ದಾನೆ. ಇವರೆಲ್ಲ ಸುಮಾರು 30,000 ರೂಪಾಯಿ ಮೌಲ್ಯದ 2 ಕಪ್ಪು ಬಣ್ಣದ ಕೋಣವನ್ನು ನೀರು, ಹುಲ್ಲು ಕೊಡದೆ ನಾಲ್ಕು ಕಾಲುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ವಧೆ ಮಾಡುವ ಉದ್ದೇಶದಿಂದ, ಸಕ್ಷಮ ಪ್ರಾಧಿಕಾರದಿಂದ ಯಾವುದೇ ಪರವಾನಗಿ ಪಡೆಯದೇ ಗೊರಟೆ ಕಡೆಯಿಂದ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ.ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Back to top