• Slide
    Slide
    Slide
    previous arrow
    next arrow
  • ಸಲುಗೆಯಿಂದ ಮಾತನಾಡುವುದೇ ಮುಳುವಾಗುತ್ತಿದೆ: ಶಾಸಕ ದಿನಕರ ಶೆಟ್ಟಿ

    300x250 AD

    ಕಾರವಾರ: ಎಲ್ಲರೊಂದಿಗೆ ಸಲುಗೆಯಿಂದ ಮಾತನಾಡುವುದೇ ನನಗೆ ಮುಳುವಾಗುತ್ತಿದೆ ಎಂದೆನಿಸುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

    ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ತಮಾಷೆಗೆ ಹೇಳಿದ ಹೇಳಿಕೆಯೊಂದನ್ನು ಕುಮಟಾದ ಬೋಗ್ರಿಬೈಲ್ ಸೇತುವೆಯ ಅಪೂರ್ಣ ಕಾಮಗಾರಿಗೆ ಸಂಬಂಧಿಸಿದಂತೆ ಹೋಲಿಕೆ ಮಾಡಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಕೆಲಸಗಾರರ ಕೊರತೆಯಿಂದಾಗಿ ಕಾಮಗಾರಿಗೆ ಹಿನ್ನಡೆಯಾಗಿದೆಯೇ ಹೊರತು, ಹೇಳಿಕೆಗೂ ಈ ಕಾಮಗಾರಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ಈ ಹಿಂದೆ ಹೊನ್ನಾವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮಾಷೆಗಾಗಿ ಈಗ ಪೂರ್ಣ ಕೆಲಸ ಮಾಡಿದರೆ ಮರೆಯುತ್ತೀರಿ, ಚುನಾವಣೆ ಸಮೀಪ ಇರುವಾಗ ಪೂರ್ಣ ಕೆಲಸ ಮಾಡುತ್ತೇವೆ ಎಂದು ಹೇಳಿದ್ದೆ. ಆದರೆ ಅದನ್ನೇ ಈಗ ಟ್ರೋಲ್ ಮಾಡಲಾಗುತ್ತಿದ್ದು, ಇದು ಮನಸ್ಸಿಗೆ ಬೇಸರ ತರಿಸಿದೆ ಎಂದರು.

    300x250 AD

    ಬಿಜೆಪಿ ಜಿಲ್ಲಾವಕ್ತಾರ ನಾಗರಾಜ ನಾಯಕ ಮಾತನಾಡಿ, ವರ್ಷದ ಹಿಂದಿನ ಹೇಳಿಕೆಯನ್ನು ಈಗ ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ಈ ಕೇಳಿಕೆ ತುಣುಕನ್ನು ಕತ್ತರಿಸಿ ಕುಮಟಾದ ಸೇತುವೆ ಪೂರ್ಣಗೊಳ್ಳದ ಕಾರಣ ಲಿಂಕ್ ಮಾಡಿದ್ದಾರೆ, ಇದು ಸರಿಯಲ್ಲ. ದಿನಕರ ಶೆಟ್ಟಿಯವರು ಲೋಪದೋಷ ಇದ್ದರೆ ತಿದ್ದಿಕೊಳ್ಳುತ್ತಾರೆ. ಆ ರೀತಿ ಮನೋಭವ ಇರುವುದರಿಂದಲೇ ಎರಡು ಬಾರಿ ಶಾಸಕರಾಗಿದ್ದಾರೆ. ಆದರೆ ಈ ರೀತಿ ವೈಯಕ್ತಿವಾಗಿ ಯಾವುದ್ಯಾವುದನ್ನೋ ಲಿಂಕ್ ಮಾಡಿ ಅವರ ಮನಸ್ಸಿಗೆ ಘಾಸಿಗೊಳಿಸುವುದು ಸರಿಯಲ್ಲ ಎಂದು ಹೇಳಿದರು.

    ಬಿಜೆಪಿ ನಗರಾಧ್ಯಕ್ಷ ನಾಗೇಶ್ ಕುರ್ಡೇಕರ್, ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ್, ವಿಶೇಷ ಆಹ್ವಾನಿತ ಮನೋಜ್ ಭಟ್, ನಗರಸಭೆಯ ಸದಸ್ಯೆ ರೇಷ್ಮಾ ಮಾಳ್ಸೇಕರ್, ಸಂದೀಪ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top