ಶಿರಸಿ: ಜೋಗ, ಶಿರಸಿ 110ಕೆ.ವಿ ಮಾರ್ಗದ ವಾಹಕ ಬದಲಾವಣೆ ಹಾಗೂ ಗೋಪುರ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ. 29 ರವಿವಾರ ದಂದು ಬೆಳಿಗ್ಗೆ 9 ಘಂಟೆ ಇಂದ ಮದ್ಯಾಹ್ನ 02.00 ಗಂಟೆ ವರೆಗೆ ಗ್ರಾಮೀಣ-2 ಶಾಖೆಯ ಸಂಪಖAಡ, ದೇವನಳ್ಳಿ, ಕೆಂಗ್ರೆ ಹಾಗೂ ಮಾರಿಗದ್ದೆ 11 ಕೆ.ವಿ ಮಾರ್ಗದ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗುವುದು.
ಅಂತೆಯೇ ಜೂನ್ 1, ಬುಧವಾರದಂದು ಬೆಳಿಗ್ಗೆ 9 ಘಂಟೆ ಇಂದ ಸಾಯಂಕಾಲ 6 ಘಂಟೆ ವರೆಗೆ ಪಟ್ಟಣ ಶಾಖೆಯ ಶಿರಸಿ-1 ಹಾಗೂ ನಿಲೇಕಣಿ 11 ಕೆ.ವಿ ಮಾರ್ಗದ ರಾಘವೇಂದ್ರ ವೃತ್ತ, ಕೋರ್ಟ್ ರಸ್ತೆ, ದೇವಿಕೆರೆ, ಹಳೆ ಬಸ್ ನಿಲ್ದಾಣ, ಕುಮಟಾ ರಸ್ತೆ, ಸಿ.ಪಿ.ಬಜಾರ್, ಝೂ ವೃತ್ತ ಪ್ರದೇಶಗಳಲ್ಲಿ ಗ್ರಾಮೀಣ-2 ಶಾಖೆಯ ಸಂಪಖAಡ, ದೇವನಳ್ಳಿ, ಕೆಂಗ್ರೆ ಹಾಗೂ ಮಾರಿಗದ್ದೆ 11 ಕೆ.ವಿ ಮಾರ್ಗದ ಪ್ರದೇಶಗಳಲ್ಲಿ, ಹುಲೇಕಲ್ ಶಾಖೆಯ ಹುಲೇಕಲ್, ವಾನಳ್ಳಿ, ಸಾಲ್ಕಣಿ 11 ಕೆ.ವಿ ಮಾರ್ಗದ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗುವುದು.
ಆದಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.