ಸಿದ್ದಾಪುರ: ತಾಲೂಕಿನ ಮಾವಿಗುಂಡಿ ಸಮೀಪದ ಕೋಡ್ಕಣಿ ಗ್ರಾಮದ ಅರಸೀಬೈಲ್ನ ರಾಜು ಕೃಷ್ಣ ನಾಯ್ಕರ ಮನೆಯಲ್ಲಿ ಗುರುವಾರ ರಾತ್ರಿ ಭಾರೀ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು ಅದನ್ನು ಉರಗತಜ್ಞ ಅನೂಪ್ ಸಾಗರ್ ಹಿಡಿದಿದ್ದಾರೆ.
ಮಾವಿನಗುಂಡಿ ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ಹುಲ್ಲೂರು ಹಾಗೂ ಅರಣ್ಯ ರಕ್ಷಕ ದೇವಿದಾಸ್ ನಾಯ್ಕ ಅವರು ಸಮೀಪದ ಕತ್ತಲೆ ಕಾನಿನಲ್ಲಿ ಬಿಟ್ಟುಬಂದಿದ್ದಾರೆ.