ಸಿದ್ದಾಪುರ: ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಯಕ್ಷಚಂದನ ದಂಟಕಲ್ ಇವರಿಂದ ಕನ್ನಡ ಮತ್ತು ಸಂಸ್ಕೃತಿ ನಿದೇಶನಾಲಯ ಬೆಂಗಳೂರು ಇದರ ಸಹಕಾರದಲ್ಲಿ ಯಕ್ಷಸಂಜೆ ಕಾರ್ಯಕ್ರಮದ ಅಂಗವಾಗಿ ‘ಜಾಂಬವತಿ ಪರಿಣಯ’ ಯಕ್ಷಗಾನ ಗುರುವಾರ ಪ್ರದರ್ಶನಗೊಂಡಿತು.
ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ನಂದನ ಹೆಗಡೆ ದಂಟಕಲ್, ಶಂಕರ ಭಾಗವತ ಶಿರಸಿ, ವಿಘ್ನೇಶ್ವರ ಗೌಡ ಕೆಸರಕೊಪ್ಪ ಸಹಕರಿಸಿದರು.
ಮುಮ್ಮೇಳದಲ್ಲಿ ವಿನಯ್ ಬೇರೊಳ್ಳಿ(ಜಾಂಬವ) ನರೇಂದ್ರ ಹೆಗಡೆ ಅತ್ತಿಮುರ್ಡು(ಬಲರಾಮ), ಕಾರ್ತಿಕ್ ಕಣ್ಣಿ(ಕೃಷ್ಣ), ವೆಂಕಟೇಶ ಬೊಗರಿಮಕ್ಕಿ(ನಾರದ) ಪಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು.