ಶಿರಸಿ: ಇಂದು ಕೌಶಲ್ಯ ಇದ್ದಲ್ಲಿ ಉದ್ಯೋಗಕ್ಕೆ ವಿಪುಲ ಅವಕಾಶಗಳಿವೆ. ಇಂತಹ ಉದ್ಯೋಗ ಮೇಳವನ್ನು ನಡೆಸುವುದರಿಂದ ಅಭ್ಯರ್ಥಿಗಳ ಅನುಭವ ಹೆಚ್ಚಾಗುತ್ತದೆ. ಇಲ್ಲಿ ಭಾಗಿಯಾಗಿರುವ ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಮಟ್ಟದಲ್ಲಿ ಉದ್ಯಗಾವಕಾಶ ದೊರೆತು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಮುಂದೆ ಬೆಳೆಯಲಿ ಎಂದು ಎಂ ಇ ಎಸ್ ಅಧ್ಯಕ್ಷ ಜಿ ಎಮ್ ಹೆಗಡೆ ಮುಳಖಂಡ ಹೇಳಿದರು.
ನಗರದ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯುಎಸಿ ಸಂಯೋಜನೆ ಯಲ್ಲಿ ಕಾಲೇಜಿನ ಪ್ಲೇಸ್ ಮೆಂಟ್ ವಿಭಾಗ ಹಾಗೂ ಐಸಿಐಸಿಐ ಬ್ಯಾಂಕ್ ನ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಕಾಲದಲ್ಲಿ ಉದ್ಯೋಗ ಸಂದರ್ಶನಕ್ಕಾಗಿ ಪತ್ರ ಬಂದರೆ ಅದೇ ದೊಡ್ಡ ಸಾಧನೆಯಾಗಿತ್ತು. ಇಂದು ಉದ್ಯೋಗ ಮೇಳದ ಮೂಲಕ ಅನೇಕ ಅವಕಾಶಗಳನ್ನು ನಿಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆ ಬುದ್ದಿವಂತ ಮಾನವ ಸಂಪನ್ಮೂಲ ಹೊಂದಿದ್ದು, ಕಂಪನಿಗಳು ಇದರ ಲಾಭ ಪಡೆಯಬೇಕು ಎಂದರು.
ಐಸಿಐಸಿಐ ಬ್ಯಾಂಕ್ ನ ಮುಖ್ಯ ಸಂಯೋಜಕ ಗೋಪಾಲ ಗಡಗಿ ಸಾಂದರ್ಭಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ ಟಿ ಎಸ್ ಹಳೆಮನೆ ಸ್ವಾಗತಿಸಿ, ಮಾತನಾಡಿ ಉದ್ಯೋಗ ಮೇಳಗಳು ಹೆಚ್ಚು ಹೆಚ್ಚು ಆಯೋಜನೆ ಆದರೆ ವಿದ್ಯಾವಂತ ಯುವಕರಿಗೆ ಸಹಾಯವಾಗಲಿದೆ ಎಂದರು. ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಪ್ರೊ. ಶೈಲಜಾ ಭಟ್ ನಿರೂಪಿಸಿದರು . ಐಕ್ಯುಎಸಿ ಸಂಯೋಜಕರಾದ ಡಾ. ಎಸ್ ಎಸ್ ಭಟ್ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ಉದ್ಯೋಗಾಕಾಂಕ್ಷಿಗಳು, ಕಾಲೇಜಿನ ಪ್ರಾಧ್ಯಾಪಕರು ಭಾಗಿಯಾಗಿದ್ದರು.