• first
    second
    third
    previous arrow
    next arrow
  • ಮೆ.29ಕ್ಕೆ ಮಾವಿನಕಟ್ಟಾದಲ್ಲಿ ಉಚಿತ ಆರೋಗ್ಯ ಶಿಬಿರ

    300x250 AD

    ಯಲ್ಲಾಪುರ; ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜ್ ಇವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಾವಿನಕಟ್ಟಾದ ಪ್ರಗತಿ ವಿದ್ಯಾಲಯ ಭರತನಹಳ್ಳಿಯಲ್ಲಿ ಮೆ.29, ರವಿವಾರದಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ಆಯೋಜಿಸಲಾಗಿದೆ.

    ಶಿಬಿರದಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ, ಉಚಿತ ಇಸಿಜಿ,ಸಾಮಾನ್ಯ ವೈದ್ಯಕೀಯ ತಪಾಸಣೆ,ಎಲುಬು-ಕೀಲು,ಸ್ತ್ರೀ ರೋಗ ತಜ್ಞರು, ಸಕ್ಕರೆ ಖಾಯಿಲೆ, ನೇತ್ರ ತಪಾಸಣೆ, ಚರ್ಮದ ಖಾಯಿಲೆ, ಕಿವಿ-ಗಂಟಲು ತಜ್ಞರ ಸೇವೆ ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿದೆ.

    300x250 AD

    ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದೆ. ಅಂತೆಯೇ ವಿಶೇಷವಾಗಿ ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ಸಾರ್ವಜನಿಕರಿಗೆ ೫೦%ರಿಯಾಯಿತಿ ದರದಲ್ಲಿ ಆಸ್ಪತ್ರೆಯ ಆರೋಗ್ಯ ಕಾರ್ಡ್ ನ್ನು ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

    Share This
    300x250 AD
    300x250 AD
    300x250 AD
    Back to top