Slide
Slide
Slide
previous arrow
next arrow

ಲತಾ ಮಂಗೇಶ್ಕರ್ ಪ್ರಶಸ್ತಿಯ ಹಣವನ್ನು ಚಾರಿಟಿಗೆ ನೀಡಿದ ಪ್ರಧಾನಿ ಮೋದಿ

300x250 AD

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಪ್ರಶಸ್ತಿಯೊಂದಿಗೆ ಬಂದ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ಅವರು ಚಾರಿಟಿಗೆ ನೀಡಿದ್ದಾರೆ.ನಗದು ಬಹುಮಾನವನ್ನು ಚಾರಿಟಿಗೆ ನೀಡಲು ಅನುಮತಿಗಾಗಿ ಅವರು ಲತಾ ಮಂಗೇಶ್ಕರ್ ಸಹೋದರನಿಗೆ ಪತ್ರ ಬರೆದಿದ್ದರು. ಇದರ ಅನುಸಾರ ಅವರ ಅನುಮತಿಯ ನಂತರ, ನಗದು ಹಣವನ್ನು ಚಾರಿಟಿಗೆ ದಾನ ಮಾಡಲಾಗಿದೆ..

“ನಮ್ಮ ಟ್ರಸ್ಟ್ ಇದನ್ನು ಪಿಎಂ ಕೇರ್ಸ್ ನಿಧಿಗೆ ನೀಡಲು ನಿರ್ಧರಿಸಿದೆ” ಎಂದು ದಿವಂಗತ ಲತಾ ಮಂಗೇಶ್ಕರ್ ಅವರ ಕಿರಿಯ ಸಹೋದರ ಹೃದಯಂತ್ ಮಂಗೇಶ್ಕರ್ ಹೇಳಿದ್ದಾರೆ.

ಹೃದಯನಾಥ್ ಮಂಗೇಶ್ಕರ್ ಅವರಿಗೆ ಪತ್ರ ಬರದಿದ್ದ ಮೋದಿ ”ಪ್ರಶಸ್ತಿಯು ಒಂದು ಲಕ್ಷ ನಗದು ಬಹುಮಾನವನ್ನು ಹೊಂದಿದೆ. ಈ ಹಣವನ್ನು ನಿಮ್ಮ ಆಯ್ಕೆಯ ಯಾವುದಾದರೂ ದತ್ತಿ ಸಂಸ್ಥೆಗೆ ದಾನ ಮಾಡಬಹುದೇ? ಎಂದು ನಾನು ವಿನಂತಿಸುತ್ತೇನೆ. ಇದರಿಂದ ಈ ಹಣವನ್ನು ಇತರರ ಜೀವನದಲ್ಲಿ ಧನಾತ್ಮಕ ವ್ಯತ್ಯಾಸವನ್ನು ತರಲು ಬಳಸಬಹುದು, ಲತಾ ದೀದಿ ಯಾವಾಗಲೂ ಇದನ್ನೇ ಮಾಡಲು ಬಯಸಿದ್ದರು” ಎಂದಿದ್ದರು.

300x250 AD

ಮೋದಿ ಕೋರಿಕೆಯಂತೆ ಪ್ರಶಸ್ತಿ ಮೊತ್ತವನ್ನು ಮಂಗೇಶ್ಕರ್‌ ಕುಟುಂಬ ಪಿಎಂ ಕೇರ್ಸ್‌ಗೆ ದಾನ ಮಾಡಿದೆ.

Share This
300x250 AD
300x250 AD
300x250 AD
Back to top