• first
  second
  third
  previous arrow
  next arrow
 • ಮಾತೃಛಾಯಾ ಟ್ರಸ್ಟ್ ವತಿಯಿಂದ ನೋಟ್ ಬುಕ್ ವಿತರಣೆ

  300x250 AD

  ಹೊನ್ನಾವರ : ಮಾತೃಛಾಯಾ ಟ್ರಸ್ಟ ಕಾಸರಕೋಡ ವತಿಯಿಂದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಕೋಡನ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು. ಟ್ರಸ್ಟ್ ಅಧ್ಯಕ್ಷ ಅಶೋಕ ಕಾಸರಕೋಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಮ್ಮ ಸಂಸ್ಥೆ ಹಲವಾರು ವರ್ಷಗಳಿಂದ ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅಳಿಲು ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು ಕಳೆದ 12 ವರ್ಷಗಳಿಂದ ಈ ಶಾಲೆಗೆ ನೋಟ್‌ಬುಕ್ ವಿತರಣೆ ಮಾಡುತ್ತಾ ಬಂದಿದೆ. ಬೆಳೆವ ಮಕ್ಕಳ ಎಳೆಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಮೂಡಬೇಕು. ದೊಡ್ಡವರಾಗಿ ಮುಂದೆ ತಾವು ಕೂಡ ಸಮಾಜದಲ್ಲಿ ಕ್ರೀಯಾಶೀಲ ಪಾತ್ರವಹಿಸಬೇಕು ಎಂಬ ಮನೋಭಿಲಾಷೆ ಅವರಲ್ಲಿ ಬೆಳೆಯಬೇಕು ಎಂದರು.

  ಅತಿಥಿಯಾಗಿ ಆಗಮಿಸಿದ ದಯಾನಿಲಯ ವಿಶೇಷ ಮಕ್ಕಳ (ಬುದ್ಧಿಮಾಂದ್ಯ) ಶಾಲೆಯ ಸ್ಥಾಪಕ ಸಿರಿಲ್ ಲೋಪಿಸ್ ರವರು ವಿಕಲಚೇತನ ಮಕ್ಕಳ ಬಗ್ಗೆ ತೋರುತ್ತಿರುವ ಕಾಳಜಿಯನ್ನು ಶ್ಲಾಘಿಸಿದರಲ್ಲದೇ ಅವರ ಸೇವಾ ಕಾರಗಳಿಗೆ ಕಿರುಕಾಣಿಕೆ ಸಲ್ಲಿಸಿದರು. ಕಾರ್ಯಕ್ರಮ ಉದ್ಘಾಟಕರಾಗಿ ಮಾತನಾಡಿದ ಸೇಫ್ ಸ್ಟಾರ್ ಸೌರ್ಹಾದ ಸಹಕಾರಿ ಸಂಸ್ಥೆಯ ಅಧ್ಯಕ್ಷ ಜಿ.ಜಿ.ಶಂಕರವರು ಮಾತೃಛಾಯಾ ಟ್ರಸ್ಟ್‌ನ ಹಲವಾರು ಕಾರ್ಯಕ್ರಮಗಳಲ್ಲಿ ನಾನು ಅತಿಥಿಯಾಗಿ ಭಾಗವಹಿಸಿದ್ದು, ಹಲವಾರು ರೀತಿಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಮಾಜಮುಖ ಕಾರ್ಯಕ್ರಮಗಳಲ್ಲಿ ಟ್ರಸ್ಟ್ ಹೆಜ್ಜೆ ಗುರುತು. ಮೂಡಿಸುತ್ತಿದೆ ಎಂದರು.ದಯಾನಿಲಯ ಶಾಲೆಗೆ ತಾನು ತನ್ನ ಕೈಲಾದ ಸಹಾಯ ನೀಡುವುದಾಗಿ ಹೇಳಿದರಲ್ಲದೇ ಮಾದರಿ ಶಾಲೆಯ ಕೊಠಡಿ ನಿರ್ಮಾಣಕ್ಕೂ ತಾನು ಸಹಕರಿಸುವುದಾಗಿ ಭರವಸೆ ನೀಡಿದರು.

  300x250 AD

  ಅತಿಥಿಗಳಾದ ಗ್ರಾ.ಪಂ. ಅಧ್ಯಕ್ಷ ಮಂಜು ಗೌಡ, ಸಿ.ಆರ್.ಪಿ.ರಮೇಶ, ಸಿರಿಲ್ ಲೋಪಿಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಮೇಸ್ತ, ಟ್ರಸ್ಟ ಕಾರ್ಯಕ್ರಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಶಾಲಾ ಶಿಕ್ಷಕಿ ಸವಿತಾ ವಂದಿಸಿದರು.ಶಿಕ್ಷಕಿ ಶಿಲ್ಪಾ ಕಾರ್ಯಕ್ರಮ ನಿರ್ವಹಿಸಿದರು.

  Share This
  300x250 AD
  300x250 AD
  300x250 AD
  Back to top