ಕಾರವಾರ: ತಾಲೂಕಿನ ದೇವಗಿರಿಯ ಹೊಳೆಗದ್ದೆ ಟೋಲ್ ನಾಕಾ ಬಳಿ ಸ್ವಿಫ್ಟ್ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಪಡಿಸಿಕೊಳ್ಳಲಾಗಿದೆ. ೧೫೭೮೦ ರೂ.ಗಳ ಮೌಲ್ಯದ ಸಾರಾಯಿ ಜೊತೆಗೆ ಇಬ್ಬರು ಆರೋಪಿಗಳನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ.
ಹಾಸನ ತಾಲೂಕಿನ ಶಂಕರನಳ್ಳಿ ನಿವಾಸಿ ಯೋಗೇಶ್ ಜಿ.ಆರ್. ಮತ್ತು ಹಳೆಕೊಯ್ಲಿ ನಿವಾಸಿ ರಾ ಜೇಶ್ ಎಚ್.ಕೆ. ಬಂಧಿತ ಆರೋಪಿಗಳು.ಅಕ್ರಮ ಮದ್ಯ ಸಾಗಾಟದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಪಿಎಸೈ ರವಿ ಗುದ್ದಿ ನೇತೃತ್ವದ ತಂಡವು ಮದ್ಯ ಸಹಿತ ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.