ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡದಂತೆ ಕರ್ನಾಟಕ ರಾಜ್ಯ ಮೀಸಲಾತಿ ಒಕ್ಕೂಟದ ವತಿಯಿಂದ ಪ್ರಧಾನಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ರವಾನಿಸಲಾಯಿತು.
ಭಟ್ಕಳದಲ್ಲಿ ಕಳೆದ ಅನೇಕ ದಿನಗಳಿಂದ ಮೀನುಗಾರ ಮೊಗೇರರು ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆಯಲು ಧರಣಿ ನಡೆಸುತ್ತಿದ್ದು ಸಂವಿಧಾನ ಬಾಹಿರವಾಗಿದೆ. ಮೀನುಗಾರ ಮೊಗೇರರು ಈಗಾಗಲೇ ಪ್ರವರ್ಗ-1 ರಲ್ಲಿ ಬರುವ ಹಿಂದುಳಿದ ಜಾತಿ ಪಟ್ಟಿಯಲ್ಲಿದ್ದು, ಹಿಂದುಳಿದ ವರ್ಗಗಳಿಗೆ ಸಿಗುವ ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ಅಲ್ಲದೇ ಅದರ ಜೊತೆಗೆ ಸಾವಿರಾರು ಮೀನುಗಾರ ಮೊಗೇರರು ಪರಿಶಿಷ್ಟ ಜಾತಿಯ ಸುಳ್ಳುಜಾತಿ ಪ್ರಮಾಣ ಪತ್ರಗಳನ್ನು ಪಡೆದು ಪರಿಶಿಷ್ಟರ ಮೀಸಲಾತಿ ಯನ್ನು ಕಬಳಿಸುತ್ತಿದ್ದಾರೆ.
ಮೊಗೇರ ಎಂಬ ಮೊಲ ಬೇಟೆಯಾಡುವ ಅಸ್ಪ್ರಶ್ಯತೆ ಅನುಭವಿಸಿದ ಪರಿಶಿಷ್ಟ ಜಾತಿಯವರಿಗೆ ಸಂವಿಧಾನದಲ್ಲಿ ಮೀಸಲಾತಿ ನೀಡಲಾಗಿದೆ. ಆದರೆ ಮೊಗೇರ ಎಂಬ ಸಮಾನಾಂತರ ಹೆಸರಿನ ದುರುಪಯೋಗ ಪಡಿಸಿಕೊಡ ಮೀನುಗಾರ ಮೊಗೇರರು(ಮೂಲತಃ ಮೊಗವೀರ ಎಂಬ ಹಿಂದುಳಿದ ವರ್ಗದ ಮೀನುಗಾರ ಕಸುಬಿನವರು) ಸಂವಿಧಾನ ಬಾಹಿರವಾಗಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರಗಳನ್ನು ಪಡೆದು ನಿಜವಾದ ಪರಿಶಿಷ್ಟ ರ ಸೌಲಭ್ಯ ದೋಚುತ್ತಿದ್ದಾರೆ.
ಈ ಮೂಲಕ ಹಗಲು ದರೊಡೆ ಮಾಡುತ್ತಿದ್ದು, ಪ್ರಧಾನಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಆದೇಶಿಸಿ ಎಲ್ಲ ಮೀನುಗಾರ ಮೊಗೇರರ ಪಡೆದ ಪರಿಶಿಷ್ಟ ಜಾತಿಯ ಸುಳ್ಳುಜಾತಿ ಪ್ರಮಾಣ ಪತ್ರಗಳನ್ನು ರದ್ದು ಪಡಿಸಲು ಕ್ರಮ ಕೈಗೊಳ್ಳಬೇಕು ಮತ್ತು ಸುಳ್ಳುಜಾತಿ ಪ್ರಮಾಣ ಪತ್ರ ಪಡೆದ ಯಾರೇ ಆಗಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮೀಸಲಾತಿ ರಕ್ಷಣಾ ಒಕ್ಕೂಟದ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ಮುಕ್ರಿ, ಒಕ್ಕೂಟದ ಪದಾಧಿಕಾರಿಗಳಾದ ಡಾ.ಘನಶಾಮ್ ಪಾಟಣಕರ್, ರಾಜೇಶ್ ದೇಶಭಾಗ್, ಸುಭಾಷ್ ಕಾನಡೆ, ರಾಘವೇಂದ್ರ ಮುಕ್ರಿ, ರವಿ ಮುಕ್ರಿ, ಸಂತೋಷ್ ಚಂದಾವರ್, ಉದಯ ನೆರಲಕಟ್ಟೆ, ಈಶ್ವರ ಮುಕ್ರಿ, ತಿಮ್ಮಪ್ಪ ಮುಕ್ರಿ, ನಾಗೇಶ್ ಎನ್.ಚಂದಾವರ್, ಮಂಜುಳ ಮುಕ್ರಿ, ವಸಂತ್ ಚಂದಾವರ್, ರೂಪಾ ಮುಕ್ರಿ, ರಾಜೇಂದ್ರ ಜೋಗಳೇಕರ, ಗೋವಿಂದ ಮುಕ್ರಿ, ಶರಾವತಿ ಮುಕ್ರಿ, ವಾಮನ ಯೇಸು ಚಂದಾವರ್,ಸವಿತಾ ಮುಕ್ರಿ, ಮಂಜುನಾಥ್ ಮುಕ್ರಿ, ಕಮಲಾಕರ್ ಬೋರಕರ, ಅಭಿಷೇಕ ಮುಕ್ರಿ, ಚಿದಂಬರ ಮುಕ್ರಿ, ಸತೀಶ್ ಎಮ್.ಚಂದಾವರ್, ನಾಗರಾಜ್ ಮುಕ್ರಿ, ಮೋಹನ್ ಬಾಬು ಚಂದಾವರ್, ಮಾಸ್ತಿ ಮುಕ್ರಿ ಮುಂತಾದವರು ಇದ್ದರು.