ಅಂಕೋಲಾ: ತಾಲೂಕಿನ ಸೆಗಡಗೇರಿ ಗ್ರಾ.ಪಂ ವ್ಯಾಪ್ತಿಯ ಅಂಬಿಗರಕೊಪ್ಪದ ನಿವಾಸಿ ಸೀತಾರಾಮ ಅಂಬಿಗ ಮನೆಯ ಸಮೀಪದ ಗಂಗಾವಳಿ ನದಿಯಲ್ಲಿ ಸೋಮವಾರ ರಾತ್ರಿ 9 ಘಂಟೆಯ ಸುಮಾರಿಗೆ ನಾಡದೋಣಿಯಲ್ಲಿ ಬಲೆಯನ್ನು ಹಾಕಿ ಮೀನನ್ನು ಹಿಡಿಯುತ್ತಿರುವಾಗ ಆಕಸ್ಮಿಕವಾಗಿ ನದಿಗೆ ಬಿದ್ದು ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ.
ತಂದೆ- ತಾಯಿ, ಹೆಂಡತಿ, ಇಬ್ಬರು ಮಕ್ಕಳು ಹಾಗೂ ಸಹೋದರ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾನೆ. ಈತನ ಅಗಲಿಕೆಗೆ ಜಿಲ್ಲಾ ಸಹಕಾರಿ ಮೀನುಮಾರಾಟ ಪೆಡರೇಷನ್ ಅಧ್ಯಕ್ಷ ರಾಜು ತಾಂಡೇಲ್, ತದಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಉಮಾಕಾಂತ ಹೊಸಕಟ್ಟಾ ಕಣಗೀಲ್, ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಸಹಕಾರಿ ಮೀನುಮಾರಾಟ ಪೆಡರೇಷನ್ ನಿರ್ದೇಶಕ ರಾಜು ಹರಿಕಂತ್ರ, ಮೀನುಗಾರರ ಮುಖಂಡ ಹೂವಾ ಖಂಡೇಕರ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.