ದಾಂಡೇಲಿ: ನಗರದ ಅಂಬೇವಾಡಿ ಶಾಖೆಯ ಕೆಡಿಸಿಸಿ ಬ್ಯಾಂಕಿನೊಳಗೆ ಆರು ಅಡಿ ಉದ್ದದ ಹಾವೊಂದು ನುಗ್ಗಿ ಸಿಬ್ಬಂದಿಯನ್ನು ಭಯಭೀತರನ್ನಾಗಿಸಿದ ಘಟನೆ ಬುಧವಾರ ನಡೆದಿದೆ.
ಹಾವು ಬ್ಯಾಂಕಿನೊಳಗೆ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಬ್ಯಾಂಕಿನಿಂದ ಹೊರಬಂದ ಸಿಬ್ಬಂದಿ ಉರಗಪ್ರೇಮಿ ರಾಘವೇಂದ್ರ ನಾಯಕಗೆ ಕರೆ ಮಾಡಿ ತಿಳಿಸಿದ್ದಾರೆ. ತಡವರಿಯದೇ ಸ್ಥಳಕ್ಕೆ ಭೇಟಿ ನೀಡಿದ ರಾಘವೇಂದ್ರ ನಾಯಕ ಅವರು ಚಾಕಚಕ್ಯತೆಯಿಂದ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.