ಶಿರಸಿ:ಕಲಾವಿದರಿಗೆ ಭಾಷೆ ಎನ್ನುವುದಿಲ್ಲ. ಯಾವುದೇ ಭಾಷೆಯಿದ್ದರೂ ಅದು ಪ್ರೇಕ್ಷಕನಿಗೆ ಮೆಚ್ಚುಗೆಯಾಗುವ ರೀತಿಯಲ್ಲಿರಬೇಕು ಎಂದು ಕನ್ನಡ ಚಿತ್ರರಂಗದ ಖ್ಯಾತ ಖಳನಟ ಶೋಭರಾಜ ಹೇಳಿದರು.
ಕುಮಟಾದಲ್ಲಿ ನಡೆಯುತ್ತಿರುವ ಚಿತ್ರೀಕರಣವೊಂದರಲ್ಲಿ ಪಾಲ್ಗೊಂಡಿದ್ದ ಅವರು ಶಿರಸಿಯ ಮುಖಾಂತರ ತಮ್ಮ ಹುಟ್ಟೂರಾದ ಸೊರಬ ತಾಲೂಕಿನ ಜಡೆಗೆ ಹೋಗುವ ಸಂದರ್ಭದಲ್ಲಿ ಅವರು ಬುಧವಾರ ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡ ಚಿತ್ರರಂಗದ ಇಂದಿನ ಬದಲಾವಣೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಕೆಜಿಎಫ್‌ನಂತಹ ಒಂದು ಚಿತ್ರ ಇಡೀ ಜಗತ್ತೆ ಅಲ್ಲಾಡಿಸಿಬಿಟ್ಟಿತು. ಕನ್ನಡದಲ್ಲಿ ಮತ್ತೆ ಅಂತಹ ಚಿತ್ರ ಬರದಿದ್ದರೂ ಅಂತಹ ಮಾದರಿಯಲ್ಲಿ ಚಿತ್ರ ತಯಾರಿಸಲು ನಿರ್ಮಾಪಕರು, ತಂತ್ರಜ್ಞರು ಮುಂದೆ ಬರುತ್ತಿರುವುದು ಕನ್ನಡದ ಪಾಲಿಗೆ ಸಂತಸದ ಸಂಗತಿಯಾಗಿದೆ ಎಂದರು.