ಬೆಂಗಳೂರು: ರಾಜ್ಯದ 75 ಸ್ಥಳಗಳಲ್ಲಿ ಮೇ 28 ರಂದು ʼಅಮೃತ ಭಾರತಿಗೆ ಕನ್ನಡದಾರತಿʼ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸ್ವಾತಂತ್ರ್ಯದ ಹೋರಾಟ ನಡೆದ ಪ್ರಮುಖ 75 ಸ್ಥಳಗಳಲ್ಲಿ ಸ್ವಾತಂತ್ರ್ಯದ ಹೋರಾಟದ ಸ್ಮರಣೆ ನಡೆಯಲಿದ್ದು ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ನಡೆಯಲಿದೆ.
ಜುಲೈ 1 ರಿಂದ 15 ರ ವರೆಗೆ ‘ಹೋರಾಟದ ನೆಲದಲ್ಲಿ ಒಂದು ದಿನʼ ಕಾರ್ಯಕ್ರಮ, ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.ಆಗಸ್ಟ್ 1 ರಿಂದ 8 ರ ವರೆಗೆ ರಥಯಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಆಗಸ್ಟ್ 9 ರಂದು ಮನೆ-ಮನೆಯಲ್ಲಿ ರಾಷ್ಟ್ರಧ್ವಜ ಕಾರ್ಯಕ್ರಮ ನಡೆಯಲಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಿಂದ ಇಲಾಖೆಯಿಂದ ಹೊರತಂದಿರುವ ಭಿತ್ತಿಪತ್ರ, ಕಿರುಚಿತ್ರ, ಲಾಂಛನ ಮತ್ತು ಅಭಿಯಾನದ ಗೀತೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಲೋಕಾರ್ಪಣೆಗೊಳಿಸಲಾಯಿತು.