ಶಿರಸಿ: ಕ್ರೀಡೆಗೆ ಧರ್ಮ, ಜಾತಿ,ಮತಗಳ ಭೇದವಿಲ್ಲ.ಸಾಮರಸ್ಯದ ಸಂಕೇತ ಕ್ರೀಡೆ. ಕ್ರೀಡೆ ದೈಹಿಕ, ಮಾನಸಿಕ ಆರೋಗ್ಯ ಕಾಪಾಡುತ್ತದೆ ಎಂದು ಎಂ ಎಂ ಕಾಲೇಜಿನ ಪ್ರಾಚಾರ್ಯ ಡಾ ಟಿ ಎಸ್ ಹಳೆಮನೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ಶಿರಸಿಯ ಪ್ರೇರಣಾ ಶೇಟ್ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಎಲ್ಲರಿಗೂ ಪ್ರೇರಣೆ ಆಗಿದ್ದಾಳೆ,ನಮ್ಮ ಕಾಲೇಜಿನಲ್ಲೂ ಅನೇಕ ಪ್ರತಿಭಾವಂತ ಕ್ರೀಡಾ ಪಟುಗಳಿದ್ದು ನಿಮಗೆಲ್ಲ ಅವಳ ಸಾಧನೆ ಸ್ಪೂರ್ತಿದಾಯಕ ವಾಗಿದೆ. ಸಾಧಿಸುವ ಛಲದಿಂದ ಹೆಸರು ಗಳಿಸಿ.ಇಂದು ನಮ್ಮ ದೇಶದಲ್ಲಿ ಕ್ರೀಡಾಪಟುಗಳಿಗೆ ವಿಪುಲ ಅವಕಾಶಗಳಿವೆ.ಶೈಕ್ಷಣಿಕ ಕಲಿಕೆಯ ಜೊತೆ ಜೊತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ ಎಂದರು.
ಕಾಲೇಜಿನ ವಿದ್ಯಾರ್ಥಿ,ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರು,ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕ್ರೀಡೆ ಮಾನಸಿಕ ಅರೋಗ್ಯ ಕಾಪಾಡುತ್ತದೆ; ಡಾ.ಟಿ.ಎಸ್. ಹಳೆಮನೆ
