ಸಿದ್ದಾಪುರ: ತಾಲೂಕಿನ ವಂದಾನೆ ಹತ್ತಿರದ ಶಿರೂರು ಕ್ರಾಸ್ ಬಳಿ ಇನೋವಾ ಹಾಗು ಇಕೋ ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿ ಆರು ಮಂದಿ ಗಾಯಗೊಂಡ ದುರ್ಘಟನೆ ನಡೆದಿದೆ. ವಂದಾನೆಯ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿದ್ದ ಮದುವೆ ದಿಬ್ಬಣ ವಾಹನ ಮಾರುತಿ ಈಕೋ ಕಾರಿಗೆ ಇನೋವಾ ಕಾರ್ ಡಿಕ್ಕಿಯಾಗಿದೆ.
ಇನೋವಾ ಕಾರು ಚಾಲಕನ ಅತಿವೇಗದ ಹಾಗು ನಿಷ್ಕಾಳಜಿತನದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮಾರುತಿ ಈಕೋ ಕಾರಿನ ಚಾಲಕ ಮಂಜುನಾಥ್ ತಂದೆ ಬೆಳ್ಳಾ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದು ಈತ ಸಿದ್ದಾಪುರದ ಕಬ್ಬಿನ ಮನೆ ಮುಳುಗುಂದ ನಿವಾಸಿ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಮಂಜುಳ ಗೌಡ, ಮೋಹಿನಿ ಗೌಡ, ಪ್ರತಿಕ್ಷ ಗೌಡ, ಪರಮಿ ಗೌಡ, ಅವರಿಗೆ ತೀವ್ರ ತರದ ಗಾಯಗಳಾಗಿದ್ದು, ಇನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ ಗಣಪತಿ ರಾಮರಾಯ ರೇವಣಕರ್ಸು,ರೇಖಾ ಇವರಿಗೂ ಗಾಯಗಳಾಗಿವೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ ಗಳ ನಡುವೆ ಡಿಕ್ಕಿ:ಮದುವೆ ದಿಬ್ಬಣ ವಾಹನ ಚಾಲಕ ಸಾವು
