ಯಲ್ಲಾಪುರ;ಕಲೆಯ ಆಸ್ವಾದನೆಯಿಂದ ಮನಸ್ಸು ಹಗುರಾಗಿ,ಜ್ಞಾನ ವಿಕಾಸಗೊಳ್ಳಲು ಸಾಧ್ಯ ಎಂದು ಕೃಷಿಕ ನರಸಿಂಹ ಭಟ್ಟ ಹೇಳಿದರು.ಅವರು ರವಿವಾರ ಸಂಜೆ ತಾಲೂಕಿನ ಬೀಗಾರಿನ ದುರ್ಗಾ ದೇವಸ್ಥಾನದ ಆವಾರದಲ್ಲಿ ವಸಂತಕಲಾ ಪ್ರತಿಷ್ಠಾನ ಬೀಗಾರ ಇವರ ಆಶ್ರಯದಲ್ಲಿ ನಡೆದ “ಸ್ವರಶ್ರೀ” ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಸಂತ ಕಲಾ ಪ್ರತಿಷ್ಠಾನ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಗಮನಾರ್ಹ ಎಂದರು.ಸಾಮಾಜಿಕ ಕಾರ್ಯಕರ್ತರಾದ ಆರ್.ಎನ್.ಕೋಮಾರ,ನಾರಾಯಣ ಹೆಗಡೆ,ಭಾಗೀರಥೀ ಭಟ್ಟ ಭಾಗವಹಿಸಿದ್ದರು.ಪ್ರಮೀಳಾ ಭಟ್ಟ ಸ್ವಾಗತಿಸಿದರು.ಉನ್ನತಿ ಉಮೇಶ ನಿರೂಪಿಸಿದರು.ಎನ್.ಐ.ಕೋಮಾರ ವಂದಿಸಿದರು.ನಂತರ ನಡೆದ ಸ್ವರಶ್ರೀ ಸಂಗೀತ ಕಾರ್ಯಕ್ರಮದಲ್ಲಿ ಶ್ರುತಿ ಭಟ್ಟ,ವಿದ್ವಾನ ದತ್ತಾತ್ರಯ ಚಿಟ್ಟೆಪಾಲ್ ಅವರ ಗಾಯನಕ್ಕೆ ಉಮೇಶ ಬೀಗಾರ ಹಾರ್ಮೋನಿಯಂ ಸಾಥ್ ಹಾಗೂ ಪ್ರದೀಪ ಕೋಟೆಮನೆ,ನಾರಾಯಣ ಭಟ್ಟ,ಶ್ರೀಧರ ಗಾಂವ್ಕಾರ ತಬಲಾಸಾಥ್ ನೀಡಿದರು.