• first
    second
    third
    previous arrow
    next arrow
  • ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಬಿದ್ದ ರೈತ: ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತ

    300x250 AD

    ಅಂಕೋಲಾ:ತಾಲೂಕಿನ ಕಸಬಾ ಕೇಣಿಯ ಗಾಂವಕರವಾಡದಲ್ಲಿ ಗದ್ದೆಗೆ ಹೋಗುತ್ತಿದ್ದ ರೈತನೊಬ್ಬ ಕಾಲುಜಾರಿ ಆಯತಪ್ಪಿ ಹಳ್ಳದಲ್ಲಿ ಬಿದ್ದು , ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಸುರೇಶ ವಿಠಲ ಗಾಂವಕರ (58) ಮೃತ ದುರ್ದೈವಿಯಾಗಿದ್ದಾನೆ .

    ರೈತಾಭಿ ಕೆಲಸ ಮಾಡಿಕೊಂಡಿದ್ದ ಈತ ಮೇ 22 ರಂದು ಬೆಳಿಗ್ಗೆ 6.30ರಿಂದ 7.30 ರ ನಡುವಿನ ಅವಧಿಯಲ್ಲಿ ತನ್ನ ಗದ್ದೆಗೆ ಹೋಗಬೇಕಾದರೆ ಕೇಣಿ ಹಳ್ಳದಲ್ಲಿ ಜಾರಿಬಿದ್ದಿದ್ದು , ತಾಲೂಕ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದ್ದು ಈ ಕುರಿತು ಮೃತನ ಸಹೋದರ ದಿನಕರ ಗಾಂವಕರ ನೀಡಿದ ದೂರಿನನ್ವಯ,ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಡಕುಟುಂಬದ ಆಧಾರ ಸ್ತಂಭವಾಗಿದ್ದ ರೈತನ ನಿಧನ ವಾರ್ತೆ ಆತನ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು, ಕುಟುಂಬದವರಿಗೆ ಸಿಡಿಲು ಎರಗಿದಂತಾಗಿದೆ.

    300x250 AD
    Share This
    300x250 AD
    300x250 AD
    300x250 AD
    Back to top