ಶಿರಸಿ: ದೇಶದ ಆಂತರಿಕ ಭದ್ರತೆ , ಶಾಂತಿಯನ್ನು ಹಾಳುಗೆಡವಲು ಮತ್ತು ಜಿಹಾದ್ ಹೆಸರಿನಲ್ಲಿ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ರೀತಿ ಭಯೋತ್ಪಾದನೆ ಎನ್ನುವುದು ದೇಶಕ್ಕೆ ದೊಡ್ಡ ಮಾರಕವಾಗಿ ಪರಿಣಮಿಸಿದೆ ಎಂದು ಸರಕಾರಿ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ. ಸತೀಶ್ ನಾಯ್ಕ್ ಹೇಳಿದರು.
ಅವರು ಶಿರಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಭಯೋತ್ಪಾದನಾ ವಿರೋಧಿ ದಿನದ ಅಂಗವಾಗಿ ಪ್ರತಿಜ್ಞೆಯನ್ನು ಬೋಧಿಸುತ್ತಾ ಶ್ರೀಲಂಕಾದಲ್ಲಿ ಭಯೋತ್ಪಾದನೆ ವಿರೋಧಿಸಿ , ಅಲ್ಲಿನ ಭಯೋತ್ಪಾದನೆ ಹತ್ತಿಕ್ಕಲು ಭಾರತದ ಸೈನಿಕರನ್ನು ಶಾಂತಿ ಕಾಪಾಡಲು ಕಳುಹಿಸಿದ ಪರಿಣಾಮವಾಗಿ ಪ್ರಧಾನಿ ರಾಜೀವಗಾಂಧಿ ಭಯೋದ್ಪಾದಕರಿಗೆ ಬಲಿಯಾದರು. ಪಕ್ಕದ ದೇಶವನ್ನು ಕಾಪಾಡಲು ಪ್ರಾಣ ಪಣಕ್ಕಿಟ್ಟ ನಮ್ಮ ಪ್ರಧಾನಿ ಅವರು ಹುತಾತ್ಮರಾದ ದಿನವನ್ನು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಯುವಕರು ಭಯೊತ್ಪಾದನೆಯಂಥ ಸಮಾಜ ಘಾತುಕ ಕೃತ್ಯಗಳನ್ನು ದಿಕ್ಕರಿಸಬೇಕೆಂದು ಪ್ರತಿಜ್ಞೆ ಬೋಧಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಉಪನ್ಯಾಸಕ ಸಂದೇಶ ಧಾರೇಶ್ವರ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಪಾಲ್ಗೊಂಡಿದ್ದರು.