• first
    second
    third
    previous arrow
    next arrow
  • ಹಸಿರು ಆಹಾರ, ನಿತ್ಯ ವ್ಯಾಯಾಮದಿಂದ ಮಂಡಿನೋವಿನ ಪರಿಹಾರ ಸಾಧ್ಯ- ಡಾ.ಪ್ರಸನ್ನ ಎಸ್

    300x250 AD

    ಶಿರಸಿ:ಯೂತ್ ಫಾರ್ ಸೇವಾ ಶಿರಸಿ ಮತ್ತು ಆರೋಗ್ಯ ಭಾರತಿ ಸಿರಸಿ , ಕೃಷಿ ವಿಚಾರ ವಿನಿಮಯ ಕೇಂದ್ರ ದೊಡ್ಮನೆ ಸಂಯುಕ್ತಾಶ್ರಯದಲ್ಲಿ ಸಿದ್ದಾಪುರ ತಾಲೂಕಿನ ದೊಡ್ಮನೆ ಯಲ್ಲಿ ಏರ್ಪಡಿಸಿದ್ದ ಉಚಿತ ಮಂಡಿನೋವಿನ ತಪಾಸಣಾ ಶಿಬಿರದಲ್ಲಿ ಸಂಪನ್ಮೂಲ ತಜ್ಞ ವೈದ್ಯರಾಗಿ ಮತ್ತಿಘಟ್ಟ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ. ಪ್ರಸನ್ನ.ಎಸ್ ಆಗಮಿಸಿ ಆರೋಗ್ಯದ ಸಲಹೆ-ಸೂಚನೆಗಳನ್ನು ನೀಡಿದರು.

    ಆಯುರ್ವೇದದ ಮೂಲ ಉದ್ದೇಶ ರೋಗ ಬರದಂತೆ ತಡೆಗಟ್ಟುವದು. ರೋಗ ಬಂದ ಮೇಲೆ ಚಿಕಿತ್ಸೆ ಮಾಡುವದು ಪಂಚಕರ್ಮ ಚಿಕಿತ್ಸೆ. ಪಂಚಕರ್ಮ ಎಂದರೆ ಮಸಾಜ್ ಸೆಂಟರ್ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ.ಇದನ್ನು ಮಾಡುವದು ದೇಹ ಶೋಧನೆಗಾಗಿ ದೇಹ ಶುದ್ಧಿಯ ನಂತರ ಚಿಕಿತ್ಸೆಯ ಪರಿಣಾಮ ಉತ್ತಮವಾಗಿರುತ್ತದೆ. ದೇಹ ಶುದ್ಧಿ ಎಂದರೇ ದೋಷತ್ರಯವಾದ ವಾತ,ಪಿತ್ತ, ಕಫ ಹೊರಹಾಕುವ ಕ್ರಿಯೆ ಎಂದು ಹೇಳಿದರು.
    ಚರ್ಮ,ಮಂಡಿನೋವು ಬೆನ್ನುನೋವು , ತಲೆನೋವು ಕಾಯಿಲೆಗಳಿಗೆ ಆಯುರ್ವೇದಲ್ಲಿ ಯಶಸ್ವಿ ಚಿಕಿತ್ಸೆ ಇದೆ.ಅಧಿಕವಾಗಿರುವ ತೂಕ, ಕ್ಯಾಲ್ಸಿಯಂ ಕೊರತೆ, ಮೊಣಕಾಲು ಚಿಪ್ಪಿನ ಸವೆತ,ಅತಿಯಾದ ಕೆಲಸ, ಮೊದಲಾದ ಕಾರಣಗಳಿಗೆ ಮಂಡಿನೋವು ಬರುತ್ತದೆ. ಇದನ್ನು ಆಯುರ್ವೇದ ದಿನಚರಿ ಪಾಲನೆ, ಹಸಿರು ಆಹಾರ, ನಿತ್ಯ ನಿಯಮಿತ ವ್ಯಾಯಾಮ, ನಮ್ಮ ಆಹಾರ ಶೈಲಿ ಇವುಗಳಿಂದ ಮಂಡಿನೋವು ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.


    ಡಾ. ಮಧುಮತಿ ಹೆಗಡೆ ಕೊಳಗಿಬೀಸ್ ,ಡಾ.ಪೂರ್ಣಿಮಾ ಪಂಚಾಳ,ಆದಿಶಕ್ತಿ ಕ್ಲಿನಿಕ್ ಶಿರಸಿ , ಡಾ.ವಾಹಿನಿ ನಾಯ್ಕ ಆಯುರ್ವೇದ ವೈದ್ಯರು, ಶಿರಸಿ ಇವರುಗಳು ತಜ್ಞ ವೈದ್ಯರಾಗಿ ಉಚಿತ ತಪಾಸಣೆ ನಡೆಸಿಕೊಟ್ಟರು.


    ನಿವೃತ್ತ ಶಿಕ್ಷಕ ಮಂಜುನಾಥ್ ಭಟ್ಟ ಗೀಜಗಿಣಿ ಅವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ ದೇಶದ ಸೈನಿಕರು ವೈದ್ಯರು ನಮ್ಮ ದೇಶದ ಎರಡು ಕಣ್ಣುಗಳು ಸೈನಿಕರು ದೇಶ ರಕ್ಷಿಸಲು ಪಣತೊಟ್ಟರೆ , ವೈದ್ಯರುಗಳು ನಮ್ಮ ಆರೋಗ್ಯ ರಕ್ಷಣೆಯ ಜವಾಬ್ದಾರಿ ಹೊತ್ತಿರುತ್ತಾರೆ ಅವರನ್ನು ಗೌರವಿಸುವ ಕರ್ತವ್ಯ ನಮ್ಮದಾಗಿದೆ ಎಂದರು.

    300x250 AD


    ದೊಡ್ಮನೆ ಕೃಷಿ ವಿಚಾರ ವಿನಿಮಯ ಕೇಂದ್ರ ಅಧ್ಯಕ್ಷ ರಾಮನಾಥ ಹೆಗಡೆ ಹುಕ್ಲಗದ್ದೆ , ಕಾರ್ಯದರ್ಶಿ ರಾಮನಾಥ ಹೆಗಡೆ ಹೂಡ್ಲಬೈಲ್, ಆರೋಗ್ಯ ಭಾರತಿಯ ಶಿರಸಿ ವಿಭಾಗ ಸಹಸಂಯೋಜಕ ನಾಗೇಶ ಪತ್ತಾರ,ಶಿರಸಿ ಆಯುರ್ವೇದ ಆಸ್ಪತ್ರೆಯ ಫಾರ್ಮಾಸಿಸ್ಟ್ ಕೃಷ್ಣಮೂರ್ತಿ, ಅಜಿತ್ ತಾಳಿಕೋಟೆ, ದೊಡ್ಮನೆ ಪ್ರೌಢಶಾಲಾ ಮುಖ್ಯಾಧ್ಯಾಪಕ ಎಫ್.ಎನ್.ಹರನಗಿರಿ ಉಪಸ್ಥಿತರಿದ್ದರು.
    100 ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಮಂಡಿನೋವಿನ ತಪಾಸಣೆ ನಡೆಸಿ ಔಷಧ ವಿತರಿಸಲಾಯಿತು.


    ಶಿರಸಿ ನಗರದ ಧನ್ಯಾಫಾರ್ಮಾ ಸುರೇಶ ಉಪಾಧ್ಯಾಯ, ಶ್ರೀಕಾಂತ ಅಗಸಾಲ(ಆರ್ಯ ಔಷಧಿ)ಶ್ರೀಧರ ಪೂಜಾರಿ,ಜೀವನ ಸುತಾರಿಯಾ ಪ್ರಕಾಶಗೌಡ( ಎವಿನ್ ಫಾರ್ಮಾ)ಗಣಪತಿ ಹೆಗಡೆ (ಪೆಂಟಾಕೇರ್ ಫಾರ್ಮಾ) ಪ್ರಶಾಂತ ಶಿರಾಲಿಎಸ್.ಜಿ.ಫೈಟೊಫಾವರ್, ರವಿ ನಾಯಕ್ (ಸಾಗರ ಫಾರ್ಮಾ) ಮಂಜುನಾಥ(ಕ್ಯಾಪ್ರೋ ಫಾರ್ಮಾ) ಮಂಜುನಾಥ (ಜಾಫನ್ ಫಾರ್ಮಾ)ಸೋಮಶೇಖರ( ಯುನಿವಾ ಫಾರ್ಮಾ) ಆನಂದ ಕಾನಡೆ (ಆಚಾರ್ಯ ಸುಶ್ರುತ ಫಾರ್ಮಾ)ಗಜಾನನ ಭಟ್ಟ್ (ರಿವಿಂಟೋ ಫಾರ್ಮಾ) ಅರುಣ ಶೇಟ್(ಕೃಷ್ಣಾ ಮೆಡಿಕಲ್) ಶಂಕರಣ್ಣ ಆನೆಜಡ್ಡಿ(ಕೃಪಾ ಮೆಡಿಕಲ್) ಯಲ್ಲಾಪುರ ಅಪೇಕ್ಸ್ ಕಂಪನಿಯ ಗಣೇಶ್ ಮೊದಲಾದ ಔಷದ ಕಂಪನಿ ಪ್ರತಿನಿಧಿಗಳು ಉಚಿತವಾಗಿ ಔಷಧಗಳನ್ನು ನೀಡಿ ಸಹಕರಿಸಿದರು.


    ಯೂತ್ ಫಾರ್ ಸೇವಾ ಕಾರ್ಯಕರ್ತರಾದ ಸುಷ್ಮಾ ಬಿಳಗಿ, ಯಶಸ್ವಿನಿ ನಾಯ್ಕ್ ,ಪಲ್ಲವಿ ದೇವಾಡಿಗ, ಅಮೃತಾ ನಾಯ್ಕ್ ,ರೇಷ್ಮಾ ಚೆನ್ನಯ್ಯ,ರೇಷ್ಮಾ ನಾಯ್ಕ್,ಪಲ್ಲವಿ ಹೆಗಡೆ ಹೊನ್ನೆಮಡಿಕೆ ನರ್ಸಿಂಗ್ ಕಾಲೇಜಿನ ಸ್ವಯಂಸೇವಕರು , ನೆಲೆಕುಳಿ ಪರಮೇಶ್ವರ ಹೆಗಡೆ , ವಕೀಲರಾದ ರಾಜೇಶ್ ಹೆಗಡೆ ಕಾರ್ಯನಿರ್ವಹಿಸಿದರು.
    ಗಣೇಶ್ ಭಟ್ಟ್ ಕಲಕೈ ಸ್ವಾಗತಿಸಿ ನಿರೂಪಿಸಿದರು. ಅಪರ್ಣಾ ಶಾಸ್ರ್ತೀ ಪ್ರಾರ್ಥಿಸಿದರು ಯೂತ್ ಫಾರ್ ಸೇವಾ ಸಂಯೋಜಕ ಉಮಾಪತಿ ಭಟ್ಟ್ ಪ್ರಾಸ್ತಾವಿಕ ಮಾತನಾಡಿದರು ಆರೋಗ್ಯ ಭಾರತಿಯ ವಿ.ಆರ್.ಭಟ್ಟ ಶಿರಸಿ ವಂದಿಸಿದರು

    Share This
    300x250 AD
    300x250 AD
    300x250 AD
    Back to top