ಶಿರಸಿ : ನಗರದಲ್ಲಿ ನೂತನವಾಗಿ ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ನಿರ್ಮಾಣವಾಗಿರುವ ಸುಪ್ರಿಯಾ ಇಂಟರ್ ನ್ಯಾಶನಲ್ ಹೊಟೆಲ್ ಮೇ. 26ರಂದು ವಿವಿಧ ಗಣ್ಯರಿಂದ ಉದ್ಘಾಟನೆಗೊಳ್ಳಲಿದೆ.
ಈ ಕುರಿತು ಸುಪ್ರಿಯಾ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ಸುದ್ಧಿಗೋಷ್ಟಿ ನಡೆಸಿದ ಹೊಟೆಲ್ ಮಾಲೀಕ ಉದ್ಯಮಿ ಭೀಮಣ್ಣ ನಾಯ್ಕ ಮಾಹಿತಿ ನೀಡಿದರು. ಮೇ. 26 ರಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೊಟೆಲ್ ಉದ್ಘಾಟನೆ ನೆರವೇರಿಸಲಿದ್ದು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಖ್ಯಾತ ಚಲನಚಿತ್ರ ನಟ ಶಿವರಾಜಕುಮಾರ್, ಜಿಲ್ಲಾ ಉಸ್ತುವಾರಿ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಇಂಧನ ಸಚಿವ ಸುನೀಲ್ ಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ, ಮಾಜಿ ಸಚಿವರಾದ ಆರ್‌ವಿ ದೇಶಪಾಂಡೆ, ಎಚ್ ಕೆ ಪಾಟೀಲ್, ಸತೀಶ ಜಾರಕಿಹೊಳಿ, ಸಂಸದ ಅನಂತಕುಮಾರ್ ಹೆಗಡೆ, ಮೈಸೂರು ಪ್ರಿಂಟರ್ಸ್ ಎಂಡಿ ಕೆ. ಎನ್ ತಿಲಕ್‌ಕುಮಾರ್, ಮಾಜಿ ಶಾಸಕ ಮಧು ಬಂಗಾರಪ್ಪ, ರಾಮಕೃಷ್ಣ ಹೆಗಡೆ ಕಡವೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಶಿರಸಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಜಯದೇವ ನೀಲೇಕಣಿ, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ರಾಮಾ ನಾಯ್ಕ ಉಪಸ್ಥಿತರಿರಲಿದ್ದಾರೆ ಎಂದರು.
ಶಿರಸಿಯಲ್ಲಿ ಸಾಕಷ್ಟು ಹೊಟೆಲ್‌ಗಳು ಇದ್ದರೂ ಪ್ರವಾಸಗರಿಗೆ ವಸತಿಯ ಸಮಸ್ಯೆಯನ್ನು ಮನಗಂಡು ಅತ್ಯಾಧುನಿಕ ವ್ಯವಸ್ಥೆ ಇರುವ ಹೊಟೆಲ್ ಮಾಡಲಾಗಿದ್ದು, ಮೇ 26 ರಿಂದ ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ. ಹೊಟೆಲ್ ಉದ್ಯಮಕ್ಕೆ ಬಂದು 28 ವರ್ಷವಾಯಿತು. ಪ್ರಸ್ತುತ ಸುಪ್ರಿಯಾ ಇಂಟರ್ನ್ಯಾಷನಲ್ ಹೊಟೆಲ್ ಈಜುಕೊಳ ಹೊರತಾಗಿ ಸ್ಟಾರ್ ಹೊಟೆಲ್ ಸೌಲಭ್ಯ ಎಲ್ಲವೂ ಒಳಗೊಂಡಿದೆ. 115 ಕೊಠಡಿಗಳು, ವೆಜ್ ಮತ್ತು ನಾನ್ ವೆಜ್ ಗೆ ಪ್ರತ್ಯೇಕ ವ್ಯವಸ್ಥೆ, ವಿಶೇಷ ಲೈಬ್ರರಿ ಹಾಲ್, ಕಾಫಿ ಶಾಪ್ ಸೇರಿದಂತೆ ಎಲ್ಲವೂ ಇದೆ ಎಂದರು.
ಈ ಸಂದರ್ಭದಲ್ಲಿ ಎಸ್ ಕೆ ಭಾಗವತ ಹಾಗೂ ಇನ್ನಿತರರು ಇದ್ದರು.