• Slide
    Slide
    Slide
    previous arrow
    next arrow
  • ಸಂಘಟನೆಗಳು ಸಮಾಜವನ್ನು ಮಾರ್ಗದರ್ಶನ ಮಾಡಬೇಕು; ಸ್ಪೀಕರ್ ಕಾಗೇರಿ

    300x250 AD

    ಶಿರಸಿ: ಸಮಾಜದಲ್ಲಿ ಕಷ್ಟದಲ್ಲಿ‌ ಇದ್ದವರಿಗೆ ನೆರವಾಗುವ ಕೆಲಸ‌ ಮಾಡಲೇಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
    ಶನಿವಾರ ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವಿಪ್ರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

    ಮನುಷ್ಯ ಸಂಘ ಜೀವಿ. ಸಂಘಟನೆ ಆಗಲೇಬೇಕು. ಸಮಾಜ ಎಲ್ಲ‌ ಹಂತದಲ್ಲಿ  ಸಂಘಟನೆ ಅಗಬೇಕು. ಎಲ್ಲ‌ ಸಂಘನೆಗಳು ಒಂದಕ್ಕೊಂದು ವಿರುದ್ಧವಲ್ಲ. ಸಮಾಜವನ್ನು‌ ಮುನ್ನಡೆಸುವ ಪ್ರಯತ್ನದ ಭಾಗವಾಗಬೇಕು. ಮಾರ್ಗದರ್ಶಕ ಸಂಘಟನೆಗಳೇ ಆಗಬೇಕು‌ ಎಂದರು. ದೊಡ್ಡ ಬಲವುಳ್ಳ ಜನಸಂಖ್ಯೆಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸುವರ್ಣ ಸಂಭ್ರಮದಲ್ಲಿದೆ. ಅದನ್ನು ವರ್ಷದಲ್ಲಿ ಸಂಭ್ರಮದಲ್ಲಿ ಆಚರಿಸುವಂತಾಗಬೇಕು. ಮುಂದಿನ ನೀಲನಕ್ಷೆಗೆ ಈ ವೇದಿಕೆ ಅನಿವಾರ್ಯ ಎಂದರು.

    ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಆರ್ಥಿಕ ಹಿಂದುಳಿದವರ ಪಟ್ಟಿಯಲ್ಲಿ ಇದ್ದರೂ ಮೂರ್ನಾಲ್ಕು ಜಾತಿ ಮರಳಿ ಸೇರಿದೆ. ಉದ್ಯೋಗಕ್ಕೆ‌ ಮಾತ್ರ ಮೀಸಲಾತಿ‌ ಸಿಕ್ಕರೆ ಉಪಯೋಗ ಆಗುತ್ತದೆ. ಪುನಃ ಈ ಸಮಸ್ಯೆ ನಿವಾರಿಸಲು ಪ್ರಯತ್ನ ಮಾಡುತ್ತೇವೆ ಎಂದರು. ಬ್ರಾಹ್ಮಣ್ಯದ ಬಗ್ಗೆ ಮಾತನಾಡಿದರೆ ಏನಾದರೂ‌ ಅಂಟಿಕೊಳ್ಳುತ್ತದೆ ಎಂಬ ಭಯ ಇದೆ. ಸಮುದಾಯದ ಬಗ್ಗೆ ಮಾತನಾಡಿದರೆ ಸಮಸ್ಯೆ ಆದರೆ ರಕ್ಷಣೆ ನೀಡುವ ಕಾರ್ಯ ಆಗಬೇಕು. ಬಡ, ಪ್ರತಿಭಾವಂತ‌ ಮಕ್ಕಳ ದತ್ತು ಪಡೆದು ಬೆಂಬಲಿಸಬೇಕು. ವಿದ್ಯಾ ಕ್ಷೇತ್ರದ ಮಕ್ಕಳನ್ನು ಅಭ್ಯಾಸಕ್ಕೆ ಹುರಿಗೊಳಿಸಬೇಕಿದೆ ಎಂದ ಅವರು, ಸಮುದಾಯಕ್ಕೆ ಶಕ್ತಿ ‌ಕೊಡುವಲ್ಲಿ ಎಡವಿದ್ದರೆ ನಾವೂ ಕಾರಣಿಗರು ಎಂದರು.
    ಶಾಸಕ ಆರ್.ವಿ.ದೇಶಪಾಂಡೆ, ಸಮಾಜದ ಅಭಿವೃದ್ದಿ ಆಗಬೇಕು. ಆದರೆ, ರಾಜಕೀಯ ಕ್ಷೇತ್ರದಲ್ಲಿ ಬೆಳೆಸಲು ನಾವೇನು ಮಾಡಿದ್ದೇವೆ? ರಾಜಕೀಯ ನಾಯಕತ್ವ ಇದ್ದವರನ್ನು ಬೆಳೆಸಿಲ್ಲ. ಆರೋಗ್ಯ‌ ಮತ್ತು ಶಿಕ್ಷಣದ ಕಡೆಗೆ ಮಹಾಸಭೆ ಕೊಡಬೇಕು. ಆ ನಿಟ್ಟಿನಲ್ಲಿ ನಮ್ಮ ಹೆಜ್ಜೆ ಇಡಬೇಕು ಎಂದೂ ಸಲಹೆ ಮಾಡಿದರು. ಬ್ರಾಹ್ಮಣರಲ್ಲಿ ಆರ್ಥಿಕ ಹಿನ್ನಡೆ ಇದ್ದವರಿಗೆ ಕೇಂದ್ರ ಸರಕಾರ ಶೇ.10 ಮೀಸಲು ಇಟ್ಟರೂ ರಾಜ್ಯ ಸರಕಾರ ಜಾರಿ‌‌ ಮಾಡಿಲ್ಲ ಎಂದರು. ಜಾರಿಗೆ ಯಡಿಯೂರಪ್ಪ ಸೇರಿದಂತೆ ಎಲ್ಲರ ಬಳಿ ಒತ್ತಡ ಹೇರಿದ್ದೆ. ಈಗಲೂ ಪ್ರಯತ್ನ ಮಾಡುತ್ತೇವೆ ಎಂದ ಅವರು ಯಾವತ್ತೂ ಜೀವನದಲ್ಲಿ ಪ್ರತಿಭೆಗೆ ಹಿಂದಾಣಿಕೆ ಮಾಡಿಕೊಳ್ಳಬಾರದು. ಬುದ್ದಿವಂತ ಜನ ಆಡಳಿತದಲ್ಲೂ ಇರಬೇಕು, ಆಡಳಿತದಲ್ಲಿ ಯೂ ಇರಬೇಕು ಎಂದೂ ಹೇಳಿದರು‌.
    ಬ್ರಾಹ್ಮಣ ಸಮಾಜದ ಅಧ್ಯಕ್ಷ ಅಶೋಕ ಹಾರ್ನಳ್ಳಿ, ಬ್ರಾಹ್ಮಣರು ತೊಂದರೆ ಆಗಿದೆ ಎಂದು ಹೇಳಿಕೊಳ್ಳುತ್ತಿಲ್ಲ. ಈಗ ಸಾಧನೆ ಮಾಡಿದವರು ಸ್ವಸಾಮರ್ಥ್ಯದ ಮೇಲೆ ಬಂದವರು. ಆರ್ಥಿಕ ಹಿಂದುಳಿದ  ನಮ್ಮ ಮಕ್ಕಳಿಗೆ ಸಂವಿಧಾನದಲ್ಲಿ ಇದ್ದರೂ ಆಗಿಲ್ಲ. ತಾಂತ್ರಿಕ ತೊಂದರೆ ಅದನ್ನು ಸರಿ ಮಾಡಲು ಎಷ್ಟು ದಿನ ಬೇಕು. ಸಿಎಂ ಬಳಿ ಕೂಡ ಸರಿ ಮಾಡಲು ಮತ್ತೆ ಮನವಿ ಮಾಡುತ್ತೇವೆ. ಬ್ರಾಹ್ಮಣದ ಎಲ್ಲ ಉಪ ಪಂಗಡಗಳೂ ಸೇರಬೇಕು ಎಂದೂ ಹೇಳಿದರು.

    ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಬ್ರಾಹ್ಮಣರಿಗೆ ಕಲಿಯುಗದಲ್ಲಿ ಅನಾಯಕತ್ವ ಇದೆ ಎಂಬ ಸಂಸ್ಕೃತ ಉಕ್ತಿ ಇದೆ. ಆದರೆ, ಬ್ರಾಹ್ಮಣ ಮಹಾಸಭಾ ಒಂದು‌ ಕೋಲ್ಮಿಂಚಾಗಿ ಕಾಣುತ್ತಿದೆ ಎಂದ ಅವರು, ಬ್ರಾಹ್ಮಣರು ಬೇಡುವದು ಬೇಡ. ಮೀಸಲಾತಿ ನೀಡಿದರೆ ವಿದೇಶದಲ್ಲೂ ರಾಯಭಾರಿಗಳಾಗಲು ಆಗುತ್ತಿರರಿಲ್ಲ . ಬ್ರಾಹ್ಮಣರು ಸ್ವಾಭಿಮಾನದ ಪ್ರತೀಕ ಎಂದರು.

    300x250 AD

    ಪಂಚಾಯತ್ ರಾಜ್ ಉಪಾಧ್ಯಕ್ಷ ಪ್ರಮೋದ ಹೆಗಡೆ, ಸ್ವರ್ಣವಲ್ಲೀ‌ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ರಾಮಚಂದ್ರಾಪುರ ಮಠಾಧೀಶ ಆರ್‌.ಎಸ್.ಹೆಗಡೆ ಹರಗಿ, ಟಿಆರ್ ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಇದ್ದರು. ಎಚ್.ಆರ್. ಗಣೇಶ, ಪ್ರಸಾದ ಹೆಗಡೆ, ಶ್ರೀಪಾದ ರಾಯ್ಸದ, ನಾರಾಯಣ ಹೆಗಡೆ, ಕೆ.ಎಸ್.ಆನಗೋಡ ಇತರರು  ವಿವಿಧ ಜವಬ್ದಾರಿ ನಿರ್ವಹಿಸಿದರು.
    ರಾಜ್ಯ ಉಪಾಧ್ಯಕ್ಷ ಶಶಿಭೂಷಣ ಹೆಗಡೆ‌ ಸ್ವಾಗತಿಸಿದರು. ಸಿಂಧೂ ಹೆಹಡೆ ನಿರ್ವಹಿಸಿದರು. ಇದೇ ವೇಳೆ ಅಶೋಕ ಹಾರ್ನಳ್ಳಿ ಅವರನ್ನು ಗೌರವಿಸಲಾಯಿತು.

    ಬ್ರಾಹ್ಮಣ ಸಮುದಾಯ ವಿಘಟಿತರಾಗಿದ್ದರೆ ನಾವು ಮುಂದೆ ಹೋಗಲು ಆಗುವದಿಲ್ಲ.
    ವಿಶ್ವೇಶ್ವರ ಭಟ್ಟ, ಪ್ರಧಾನ ಸಂಪಾದಕರು, ವಿಶ್ವವಾಣಿ

    ಸರಕಾರದ ಕಡೆಯಿಂದ ಸಿಗಬೇಕಾದ ಸೌಲಭ್ಯಕ್ಕೆ ಎಲ್ಲರ ಸಹಕಾರ ಬೇಕಿದೆ.
    ಅಶೋಕ ಹಾರ್ನಳ್ಳಿ, ಅಧ್ಯಕ್ಷರು, ಮಹಾಸಭಾ

    Share This
    300x250 AD
    300x250 AD
    300x250 AD
    Leaderboard Ad
    Back to top