ಹೊನ್ನಾವರ: ತಾಲೂಕಿನ ಅನಿಲಗೋಡ ಶ್ರೀಕುಮಾರರಾಮ ಮಹಾಸತಿ ಹಾಗೂ ಪರಿವಾರ ದೇವತೆಗಳ ಬಂಡಿಹಬ್ಬವು ವಿಜೃಂಭಣೆಯಿಂದ ಸಂಪನ್ನಗೊಂಡಿತು. ಕಡುಗಲಿ ಕುಮಾರರಾಮನ ಏಕೈಕ ದೇವಾಲಯ ಅನಿಲಗೋಡ ನಲ್ಲಿದ್ದು, ಗತ ಚರಿತ್ರೆಯನ್ನು ಸ್ಮರಿಸುವ ಅನಿಲಗೋಡ ಹಬ್ಬದಲ್ಲಿ ಹೂವಿನ ಮಕ್ಕಳು, ಆರತಿ ಮಕ್ಕಳು, ಶೂಲದ ಕಂಬ ಏರುವುದು, ಶೇಡಿ ಆಡುವುದು ಮುಂತಾದ ಸಾಂಪ್ರದಾಯಿಕ ಜಾನಪದ ಸೊಗಡಿನ ಆಚರಣೆಗಳು ಜನ ಮನವನ್ನು ಆಕರ್ಷಿಸಿತು.
ಹೊನ್ನಾವರದಲ್ಲಿ ಬಂಡಿಹಬ್ಬ ಸಂಪನ್ನ
