ಅಂಕೋಲಾ: ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದ 30 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ವಸತಿ ಶಾಲೆಯ ಫಲಿತಾಂಶ ಶೇಕಡಾ 100 ದಾಖಲಿಸಿದೆ.
18 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ಮತ್ತು 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತೀರ್ಣರಾಗಿದ್ದು ಶಾಲೆಯ ಗುಣಾತ್ಮಕ ಫಲಿತಾಂಶವು ‘ಎ ‘ ಗ್ರೇಡ್ ಆಗಿದೆ,ಪ್ರಥಮ ಸ್ಥಾನ ರಮ್ಯಾ ಶಾಂತ ಗೌಡ 99.52ದ್ವಿತೀಯ ಸ್ಥಾನ ಶ್ರೀರಕ್ಷಾ ಸಂಗೂರಮಠ 97.92, ತೃತೀಯ ಸ್ಥಾನ ಅನುಸೂಯ ಕಾತ್ರೋಟ್ 97.6 ಪಡೆದಿರುತ್ತಾರೆ ಹಾಗೂ ಕನ್ನಡ ಭಾμÁ ವಿಷಯದಲ್ಲಿ 3, ಇಂಗ್ಲೀμï ಭಾμÁ ವಿಷಯದಲ್ಲಿ 03, ಹಿಂದಿ ಭಾμÁ ವಿಷಯದಲ್ಲಿ 07, ಗಣಿತ ವಿಷಯದಲ್ಲಿ 06 ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ 02 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿರುತ್ತಾರೆ.
ಶಾಲೆಗೆ ಹಾಗೂ ಪಾಲಕರಿಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕಾರವಾರ, ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.