• first
    second
    third
    previous arrow
    next arrow
  • ಎರಡು ದಿನಗಳ ಮಾವು ಮೇಳಕ್ಕೆ ಚಾಲನೆ;ಇಂದು ಕೊನೆಯ ದಿನ

    300x250 AD

    ಅಂಕೋಲಾ: ಬೆಳೆಗಾರರ ಸಮಿತಿ ಆಶ್ರಯದಲ್ಲಿ ದಲ್ಲಾಳಿ ಮುಕ್ತ ಮಾರುಕಟ್ಟೆ ಒದಗಿಸುವ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿರುವ ಮಾವು ಮೇಳವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಿ ಎರಡು ದಿನಗಳ ಮೇಳಕ್ಕೆ ಚಾಲನೆ ನೀಡಿದರು.

    ಮಾವು ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಕೋಲಾದ ಕರಿ ಈಶಾಡ ಮಾವಿನ ಹಣ್ಣು ಇಲ್ಲಿಯ ಮಣ್ಣಿನ ವಿಶೇಷ ಗುಣವನ್ನು ಹೊಂದಿದೆ. ಇಲ್ಲಿ ಬೆಳೆಯುವ ಕರಿ ಈಶಾಡದ ಸವಿ ಎಲ್ಲಿಯೂ ಸಿಗುವದಿಲ್ಲ. ಕರಿ ಈಶಾಡ ಮತ್ತು ಬೇರೆ ಬೇರೆ ಜಾತಿಯ ಮಾವಿನ ಹಣ್ಣಿಗೆ ಸೂಕ್ತ ಮಾರುಕಟ್ಟೆ ಸಿಗಬೇಕು. ಅಲ್ಲದೆ ಅಂಕೋಲಾ ತಾಲೂಕಿನಾದ್ಯಂತ ಹೇರಳವಾಗಿ ಬೆಳೆಯುವ ವಿವಿಧ ಜಾತಿಯ ಅನೇಕ ಮಾವಿನ ಹಣ್ಣುಗಳನ್ನು ಕೆಡದಂತೆ ರಕ್ಷಿಸಲು ಶೀತಲಿಕರಣ ಘಟಕದ ವ್ಯವಸ್ಥೆಯಾಗಬೇಕಿದೆ ಎಂದರು.

    ಬೆಳೆಗಾರರ ಸಮಿತಿಯ ಅಧ್ಯಕ್ಷ ನಾಗರಾಜ ನಾಯಕ ಪ್ರಾಸ್ತಾವಿಕ ಮಾತನಾಡಿ, ಇಲ್ಲಿನ ಮಾವಿನ ಹಣ್ಣುಗಳು ಅತ್ಯಂತ ಜನಪ್ರಿಯತೆ ಪಡೆದಿದ್ದರೂ ಮಾರುಕಟ್ಟೆಯ ಕೊರತೆ ಇದೆ. ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಲಾಭಾಂಶವೆಲ್ಲ ದಲ್ಲಾಳಿಗಳ ಪಾಲಾಗುತ್ತಿದೆ. ಅಂಕೋಲಾದಲ್ಲಿ ಹಣ್ಣುಗಳನ್ನು ಸಂರಕ್ಷಿಸಲು ಒಂದು ಐಸ್ ಪ್ಲಾಂಟ್ ಅವಶ್ಯಕತೆ ಇದೆ. ಮಾವು ಮೇಳದ ಸಂಘಟನೆಯ ಉದ್ದೇಶ ಎಲ್ಲ ರೀತಿಯ ಹಣ್ಣುಗಳ ಬೆಳೆಗಾರರಿಗೆ ಯೋಗ್ಯ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆಯಾಗಬೇಕು ಹಾಗೂ ಹಣ್ಣುಗಳಿಗೂ ಬೆಂಬಲ ಬೆಲೆ ಸಿಗಬೇಕು ಎಂದರು.

    ಜಿ.ಪಂ. ಮಾಜಿ ಅಧ್ಯಕ್ಷ ರಮಾನಂದ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾವು ಮೇಳದ ಆಯೋಜನೆ ಪ್ರಾಯೋಗಿಕವಾಗಿದ್ದರೂ ಮುಂದಿನ ದಿನಗಳಲ್ಲಿ ಇದು ರೈತರಿಗೆ ಅನುಕೂಲ ಮಾಡಿಕೊಡಲಿದೆ. ಮಾವಿನ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ದೊರೆಯುವಂತೆ ಎಲ್ಲರೂ ಶ್ರಮಿಸಬೇಕು ಎಂದರು.

    300x250 AD

    ಹನುಮಂತ ಗೌಡ ವಿಶೇಷವಾಗಿ ತಯಾರಿಸಿದ ಮಾವಿನ ಹಣ್ಣಿನ ಹಾರವನ್ನು ಶಿವರಾಮ ಹೆಬ್ಬಾರರಿಗೆ ಹಾಕಿ ಸ್ವಾಗತಿಸಿದರು. ಬೆಳೆಗಾರರ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ಹೆಗಡೆ ನಿರೂಪಿಸಿದರು. ರಾಘು ಕಾಕರಮಠ ವಂದಿಸಿದರು. ವೇದಿಕೆಯಲ್ಲಿ ಬೆಳೆಗಾರರ ಸಮಿತಿಯ ಗೌರವಾಧ್ಯಕ್ಷ ಭಾಸ್ಕರ ನಾರ್ವೇಕರ, ಉಪಾಧ್ಯಕ್ಷ ಹನುಮಂತ ಗೌಡ, ದೇವರಾಯ ನಾಯಕ, ಜೈಹಿಂದ ಸಂಸ್ಥೆಯ ಅಧ್ಯಕ್ಷ ಪದ್ಮನಾಭ ಪ್ರಭು ಇದ್ದರು.

    ಅಂಕೋಲೆಯ ಪ್ರಸಿದ್ಧ ಕರಿ ಈಶಾಡು ಹಣ್ಣಿನ ಜೊತೆಗೆ ಆಪೂಸ್, ಚಾಲ್ತಿ, ನೀಲಂ, ರತ್ನಾಗಿರಿ ಆಪೂಸ್, ತೋತಾಪುರಿ ಸೇರಿದಂತೆ ವಿವಿಧ ಜಾತಿಯ ಮಾವಿನ ಹಣ್ಣುಗಳು ಮಾರಾಟಕ್ಕೆ ಬಂದಿದ್ದವು. ಕಸಿ ಮಾಡಿದ ಮಾವಿನ ಗಿಡಗಳು ಮಾರಾಟವಾದವು. ಮಾವಿನ ಉಪ ಉತ್ಪನ್ನಗಳಾದ ಮಾವಿನ ಉಪ್ಪಿನ ಕಾಯಿ, ಮಾವಿನ ಹುಳಿ, ಹಪ್ಪಳ ಮತ್ತಿತರ ಉತ್ಪನ್ನಗಳು ಗಮನ ಸೆಳೆದವು.

    Share This
    300x250 AD
    300x250 AD
    300x250 AD
    Back to top