ಭಟ್ಕಳ: ನೀರು ಹರಿಯುವ ಕಾಲುವೆಯಲ್ಲಿ ಬಿದ್ದು ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಬೆಂಗ್ರೆ- 2 ಪಡುಶಿರಾಲಿಯಲ್ಲಿ ನಡೆದಿದೆ.
ವಿಜೇತ ನಾಯ್ಕ (4) ಮೃತ ಬಾಲಕ. ಅಂಗನವಾಡಿ ಮುಗಿಸಿ ಬಂದಿದ್ದ ಬಾಲಕನನ್ನು ಮಧ್ಯಾಹ್ನ ತಾಯಿ ಆಟವಾಡಲು ಬಿಟ್ಟು ತಾನು ಮನೆ ಕೆಲಸ ಮಾಡುತ್ತಿದ್ದಳು. ಸತತವಾಗಿ ಸುರಿದ ಮಳೆಯಿಂದಾಗಿ ಬಾಲಕನ ಮನೆಯ ಹಿಂಬದಿಯ ಕಾಲುವೆ ತುಂಬಿ ಹರಿಯುತ್ತಿತ್ತು. ಆಟವಾಡುತ್ತ ಕಾಲುವೆ ಬಳಿ ತೆರಳಿದ ವಿಜೇತ ಕಾಲುವೆಯಲ್ಲಿ ಬಿದ್ದಿದ್ದಾನೆ.
ತಕ್ಷಣ ಬಾಲಕನನ್ನು ಶಿರಾಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವವರೆಗೆ ಬಾಲಕ ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.