• Slide
    Slide
    Slide
    previous arrow
    next arrow
  • ಅರಣ್ಯ ಭೂಮಿ ಹಕ್ಕು;ಜುಲೈಯಲ್ಲಿ ಸುಫ್ರೀಂ ಕೋರ್ಟ್ ತೀರ್ಮಾನ ನಿರ್ಣಾಯಕ

    300x250 AD

    ಶಿರಸಿ: ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ವೈಪಲ್ಯದಿಂದ ಭೂಮಿ ಹಕ್ಕಿನಿಂದ ವಂಚಿತರಾಗಿರುವ ಅರಣ್ಯವಾಸಿಗಳ ರಕ್ಷಣೆಗೆ ರಾಜ್ಯ ಸರಕಾರ ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರ ತಿದ್ದುಪಡಿ ಹಾಗೂ ಹೇಚ್ಚುವರಿ ಪ್ರಮಾಣ ಪತ್ರ ಸಲ್ಲಿಸುವುದರ ಮೇಲೆ ಅರಣ್ಯವಾಸಿಗಳ ಭೂಮಿ ಹಕ್ಕಿನ ಭವಿಷ್ಯ ಅಡಕವಾಗಿದೆ.

    ದೇಶದ ಏಂಟು ಪರಿಸರವಾದಿ ಸಂಘಟನೆಗಳು ಸುಫ್ರೀಂ ಕೋರ್ಟನಲ್ಲಿ ಅನರ್ಹ ಅರಣ್ಯವಾಸಿಗಳನ್ನು ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಿ, ಅತೀಕ್ರಮಣ ಪ್ರದೇಶವನ್ನ ಅರಣ್ಯೀಕೃತ ಮಾಡಬೇಕೆಂದು ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಮೇಲೆ ಸುಫ್ರೀಂ ಕೋರ್ಟ ಮುಂದಿನ ದಿನಗಳಲ್ಲಿ ಈ ಹಿಂದೆ ಹರಿಯಾಣ ರಾಜ್ಯದ ಹತ್ತು ಸಾವಿರ ಅರಣ್ಯವಾಸಿಗಳನ್ನು ಅನಧೀಕೃತ ಒತ್ತುದಾರರೆಂದು ಪರಿಗಣಿಸಿ ಆರು ವಾರದಲ್ಲಿ ಸಂಪೂರ್ಣ ಒಕ್ಕಲೆಬ್ಬಿಸಬೇಕೆಂದು ನೀಡಿದ ಆದೇಶದ ತತ್ವವನ್ನೇ ಇಲ್ಲಿಯೂ ಅನುಸರಿಸಬಹುದೆಂದು ಅರಣ್ಯವಾಸಿಗಳ ಆತಂಕಕ್ಕೆ ಕಾರಣವಾಗಿದೆ.

    ರಾಜ್ಯ ಸರಕಾರ ಸುಫ್ರೀಂ ಕೋರ್ಟನಲ್ಲಿ ಬುಡಕಟ್ಟು ಜನಾಂಗ 68,432 ಅರ್ಜಿಗಳನ್ನು ಸಲ್ಲಿಸಿದ್ದರೇ, 2,27,014 ಅರ್ಜಿಗಳನ್ನ ಪಾರಂಪರಿಕ ಅರಣ್ಯವಾಸಿಗಳು ಅರ್ಜಿ ಸಲ್ಲಿಸಿದ್ದು ಇರುತ್ತದೆ. ಅಲ್ಲದೇ, ಬುಡಕಟ್ಟು ಜನಾಂಗಗಳ 35,521 ಹಾಗೂ 1,41,019 ಪಾರಂಪರಿಕ ಅರ್ಜಿಗಳು ತೀರಸ್ಕರಿಸಲಾಗಿದ್ದು ಇರುತ್ತದೆ. ತೀರಸ್ಕ್ರತ ಅರ್ಜಿದಾರರನ್ನ ನ್ಯಾಯಾಲಯದ ಮುಂದಿನ ವಿಚಾರಣೆ ಒಳಗೆ ಒಕ್ಕಲೆಬ್ಬಿಸುವ ಬಗ್ಗೆ ಗಂಭೀರವಾಗಿ ಕ್ರಮ ಜರುಗಿಸಲಾಗುವುದೆಂದು ರಾಜ್ಯ ಸರಕಾರ ಇಗಾಗಲೇ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಪ್ರಸ್ತಾಪವಾಗಿರುವುದು ವಿಷಾದಕರ.

    ಕೇಂದ್ರ ಸರಕಾರ ಅರ್ಜಿಗಳನ್ನ ಪುನರ್ ಪರಿಶೀಲಿಸಲಾಗುವುದೆಂಬ ಸುಫ್ರೀಂ ಕೋರ್ಟಿಗೆ ನೀಡಿದ ವಾಗ್ದಾನ ನೀಡಿದ್ದು, ಅದರಂತೆ, ರಾಜ್ಯ ಸರಕಾರ ಜುಲೈ 8, 2019 ರಂದು ಸುಫ್ರೀಂ ಕೋರ್ಟನಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಅರ್ಜಿಗಳನ್ನ 18 ತಿಂಗಳುಗಳಲ್ಲಿ ವಿಲೇಮಾಡುವುದಾಗಿ ಪ್ರಮಾಣಿಕರಿಸಿತ್ತು. ಆದರೇ, ಈ ಕಾಲಮಾನದಂಡ ಕಳೆದ ವರ್ಷ ಜನವರಿಯಲ್ಲಿ ಅಂತ್ಯವಾಗಿದ್ದರೂ ಇಂದಿನವರೆಗೂ ಅರ್ಜಿಗಳ ವಿಲೇವಾರಿ ಶೇ 5 ರಷ್ಟು ವಾಗದೇ ರಾಜ್ಯ ಸರಕಾರ ಸುಫ್ರೀಂ ಕೋರ್ಟಿನಿಂದ ನ್ಯಾಯಾಂಗ ನಿಂದನೆಗೆ ಒಳಪಡುವ ಪ್ರಸಂಗ ಬಂದೊದಗಿದೆ ಎಂದರೇ ತಪ್ಪಾಗಲಾರದು.

    300x250 AD

    ಜುಲೈ ಸುಫ್ರೀಂ ಕೋರ್ಟ್ ಅಂತಿಮ ತಿರ್ಮಾನ :

    ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿದ ಅರ್ಜಿ ಅಂತಿಮ ವಿಚಾರಣೆ ಜುಲೈಯಲ್ಲಿ ಸುಫ್ರೀಂ ಕೋರ್ಟನಲ್ಲಿ ಜರುಗಲಿರುವುದರಿಂದ, ರಾಜ್ಯ ಸರಕಾರ ಅರಣ್ಯವಾಸಿಗಳ ಪರವಾಗಿ ಪ್ರಮಾಣ ಪತ್ರ ಸಲ್ಲಿಸಬೇಕು. ಇಲ್ಲದಿದ್ದರೇ, ಜಿಲ್ಲೆಯ ಜನಸಂಖ್ಯೆಯ ಒಂದು ಮೂರಾಂಶ ರಷ್ಟು ಇರುವ ಅರಣ್ಯವಾಸಿಗಳ ಒಕ್ಕಲೆಬ್ಬಿಸುವಿಕೆಯಿಂದ ಉತ್ತರ ಕನ್ನಡ ಜಿಲ್ಲೆ ನಿರಾಶ್ರಿತ ಜಿಲ್ಲೆಯಾಗುವುದೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಖೇದ ವ್ಯಕ್ತಪಡಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top