ಸಿದ್ದಾಪುರ: 2021-22 ನೇಸಾಲಿನ ಎನ್.ಎಮ್.ಎಮ್.ಎಸ್. (ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕೊಲರ್ಶಿಪ್ ) ಪರೀಕ್ಷೆಯಲ್ಲಿ ಸಿದ್ದಾಪುರ ತಾಲೂಕಿನ ಎಂ.ಜಿ.ಸಿ.ಎಂ. ಪ್ರೌಢಶಾಲೆಯ ಒಂಬತ್ತನೇತರಗತಿ ವಿದ್ಯಾರ್ಥಿನಿ ಕುಮಾರಿ ಸಿಂಚನಾ ಮಹಾಬಲೇಶ್ವರ ಹೆಗಡೆ ಉತ್ತೀರ್ಣಳಾಗಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಆಗಿದ್ದಾಳೆ. ಆಯ್ಕೆಯಾದ ವಿದ್ಯಾರ್ಥಿಗೆ ಒಂಬತ್ತನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ.ಯವರೆಗೆ ಮಾಸಿಕ 1,000 ರೂಪಾಯಿಗಳ ವಿದ್ಯಾರ್ಥಿವೇತನವನ್ನು ಕೇಂದ್ರ ಸರಕಾರವು ನೀಡುತ್ತದೆ.
ಸಿಂಚನಾ ಇವಳು ಕೊಡ್ಗಿಬೈಲಿನ ಮಹಾಬಲೇಶ್ವರ ಹೆಗಡೆ ಮತ್ತು ಮಹಾಲಕ್ಷ್ಮಿ ಹೆಗಡೆ ದಂಪತಿ ಮಗಳಾಗಿದ್ದು, ವಿದ್ಯಾರ್ಥಿಯ ಈ ಸಾಧನೆಗೆ ಆಡಳಿತಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಾಲಾಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ, ಶುಭಕೋರಿದ್ದಾರೆ.