ಕಾರವಾರ: ತಾಲ್ಲೂಕಿನ ಮದನೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಯುವಕನೋರ್ವ ಸಿಡಿಲಿಗೆ ಬಲಿಯಾದ ಘಟನೆ ನಡೆದಿದೆ.
ಮೃತ ಯುವಕನು ಮದನೂರು ನಿವಾಸಿ ಆನಂದ ದೊಂಡು ಬರಗಾಡೆ (21) ಎಂಬುವವನಾಗಿದ್ದು ತಾಲೂಕಿನಾದ್ಯಂತ ಶುಕ್ರವಾರ ಸುರಿಯುತ್ತಿದ್ದ ಜಿಟಿಜಿಟಿ ಮಳೆಯ ನಡುವೆ ಹೊಲದ ಕೆಲಸಕ್ಕೆಂದು ತೆರಳಿದ್ದನು. ಈ ವೇಳೆ ದುರದೃಷ್ಟವಶಾತ್ ಸಿಡಿಲು ಆರ್ಭಟಿಸಿದ್ದು ಹೊಲದಲ್ಲಿ ಕೆಲಸ ಮಾಡುತ್ತಿದ್ದವನಿಗೆ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ತಂದೆತಾಯಿಗೆ ಒಬ್ಬನೇ ಗಂಡುಮಗನಾಗಿದ್ದು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.