ಯಲ್ಲಾಪುರ; ತಾಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಎಸ್.ಎಸ್.ಎಲ್ ಸಿ ಫಲಿತಾಂಶ ನೂರಕ್ಕೆ ನೂರಷ್ಟಾಗಿದೆ.
ಪರೀಕ್ಷೆಗೆ 31 ವಿದ್ಯಾರ್ಥಿಗಳು ಕುಳಿತಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ.21 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕ ಪಡೆದಿದ್ದು
ಸಂಜನಾ ಗೌಡ 99.36 ಅಂಕ ಪಡೆದು ರಾಜ್ಯಕ್ಕೆ ಐದನೇಯ ಸ್ಥಾನ ಪಡೆದಿದ್ದಾಳೆ.
ಅಖಿಲಾ ಹೆಗಡೆ 98.4,ವಿನಯ ಬೋವಿವಡ್ಡರ್ 97.92,ಸಾಗರ ಹೆಗಡೆ 97.28,ಹರ್ಷ ಕುಡಾರ್ಕರ 96.96 ಅಂಕ ಪಡೆದಿದ್ದಾರೆ.
ತೃತೀಯ ಭಾಷೆಯಲ್ಲಿ 13 ವಿದ್ಯಾರ್ಥಿಗಳು,ಗಣಿತದಲ್ಲಿ 9,ಸಮಾಜ ವಿಜ್ಞಾನದಲ್ಲಿ 8,ವಿಜ್ಞಾನದಲ್ಲಿ ಓರ್ವವಿದ್ಯಾರ್ಥಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ಆರ್.ಎನ್.ಹೆಗಡೆ ಗೊರ್ಸಗದ್ದೆ ತಿಳಿಸಿದ್ದಾರೆ.