ಯಲ್ಲಾಪುರ; ಭಾರತ ಗ್ಯಾಸ್ ವತಿಯಿಂದ ಗ್ರಾಹಕರಿಗೆ ಆನಲೈನ್ ಕುಕರಿ ಕ್ವಾಂಟೆಸ್ಟ್ ಆಯೋಜಿಸಲಾಗಿದೆ. ಈ ಅಡುಗೆ ಸ್ಪರ್ಧೆಯಲ್ಲಿ ಎಲ್ಲರೂ ಮುಕ್ತವಾಗಿ ಭಾಗವಹಿಸಬಹುದು ಎಂದು ಶಮಾ ಭಾರತ ಗ್ಯಾಸ್ ನ ಮಾಲಕ ಎ.ಎ.ಶೇಖ್ ಹೇಳಿದರು.
ಅವರು ಶನಿವಾರ ಈ ಕುರಿತು ಮಾಹಿತಿ ನೀಡಿ,ಮೊದಲ ಹಂತದಲ್ಲಿ ರಾಜ್ಯಗಳಿಗೆ ಅನುಸಾರ ಸ್ಪರ್ಧೆ ಆಯೋಜಿಸಲಾಗಿದೆ.ತಯಾರಿಸಿದ ಅಡುಗೆ ಪ್ರಸಿದ್ದವಾಗಿರಬೇಕು.ಲಿಖಿತ ರೂಪದ ಜತೆಗೆ ವಿಡಿಯೋ ತುಣುಕುಗಳನ್ನು ಹೆಸರು ವಿಳಾಸ ಮಾಹಿತಿಯೊಂದಿಗೆ ಕಳುಹಿಸಬೇಕು.ಒಬ್ಬ ಸ್ಪರ್ಧಿಯಿಂದ ಒಂದು ವಿಡಿಯೋ ಮಾತ್ರ ಮಾನ್ಯ ಮಾಡಲಾಗುತ್ತದೆ.ಪ್ರತಿ ರಾಜ್ಯದಿಂದ ಮೂರು ಸ್ಪರ್ಧಿಗಳನ್ನು ಫಿನಾಲೆಗೆ ಕಳುಹಿಸಲಾಗುತ್ತದೆ.ಆಲ್ ಇಂಡಿಯಾ ಫಿನಾಲೆಯನ್ನು ಭಾರತ ಗ್ಯಾಸ್ ಯುಟೂಬ್ ಚಾನಲ್ ಮೂಲಕ ಪ್ರಸಾರ ಮಾಡಲಾಗುತ್ತದೆ. ಸ್ಪರ್ಧಿಗಳು ಮಾಡಿದ ಅಡುಗೆಯ ವಿಡಿಯೋ ತುಣುಕುಗಳನ್ನು ಇಮೇಲ್ ವಿಳಾಸ bhatgasconnect @gmail.com ಮೂಲಕ ಕಳುಹಿಸಬೇಕು.
ಸ್ಪರ್ಧಿಗಳು ಮಾಡಿದ ಅಡುಗೆಯನ್ನು ಪೋನ್ ಅಡ್ಡಲಾಗಿಟ್ಟುಕೊಂಡು ವಿಡಿಯೋ ಮಾಡಬಹುದಾಗಿದೆ.ವಿಡಿಯೋ ತುಣುಕು 2 ನಿಮಿಷಕ್ಕಿಂತ ಹೆಚ್ಚಿರಬಾರದು.ಅಡುಗೆಯ ವಿಧಾನ ಬಳಸಿದ ಸಾಮಾಗ್ರಿಗಳ ವಿವರ ಲಿಖಿತ ರೂಪದಲ್ಲೂ ಸಲ್ಲಿಸಬೇಕು. ಸ್ಪರ್ಧಾ ವಿಜೇತರಿಗೆ ರಾಷ್ಟ್ರೀಯ ವಿಜೇತ ಪ್ರಥಮ 51 ಸಾವಿರ ರೂ,ದ್ವೀತಿಯ 25 ಸಾವಿರ,ಹಾಗೂ ಐದು ರಾಷ್ಟ್ರೀಯ ಬಹುಮಾನ ತಲಾ ಹತ್ತು ಸಾವಿರ ರೂಪಾಯಿಗಳು ಬಹುಮಾನವಿದೆ. ಮೆ.31 ರೋಳಗೆ ವಿಡಿಯೋ ಕಳುಹಿಸಬೇಕು ಎಂದರು.ಭಾರತ್ ಗ್ಯಾಸನ ನ ಟೆರಿಟೆರಿ ಮ್ಯಾನೇಜರ್ ಬಿಸ್ವಾಸ ಮಂಡಲ್ ಹಾಗೂ ಸೆಲ್ಸ್ ಅಧಿಕಾರಿ ಮೈಯಂಕ ಥಲರಿಸಾ ಪಟ್ಟಣಕ್ಕೆ ಶನಿವಾರ ಆಗಮಿಸಿ ಸ್ಪರ್ಧೆಯ ವಿವರ ನೀಡಿ ಗ್ರಾಹಕರು ಭಾಗವಹಿಸಲು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 7338532786 ಗೆ ಸಂಪರ್ಕಿಸಬಹುದು ಎಂದರು.ಈಸಂದರ್ಭದಲ್ಲಿ ಮುಜಿಬ್ ಶೇಖ್ ಇದ್ದರು