ಸಿದ್ದಾಪುರ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ 2022-23ನೇ ಸಾಲಿನ ಡಿಪ್ಲೋಮಾ ಪ್ರಥಮ ವರ್ಷದ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ & ಇಂಜಿನಿಯರಿಂಗ್, ಇಲೆಕ್ರ್ಟಾನಿಕ್ಸ & ಕಮ್ಯೂನಿಕೇಶನ್ ಇಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮ ವಿಭಾಗಗಳಿಗೆ ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಪ್ರವೇಶವನ್ನು ನೀಡಲಾಗುತ್ತಿದೆ. ಸಂಸ್ಥೆಯು ಸುಸಜ್ಜಿತ ಕಟ್ಟಡ, ಲ್ಯಾಬೊರೇಟರಿ, ಗ್ರಂಥಾಲಯ ಮತ್ತು ನುರಿತ ಉಪನ್ಯಾಸಕರನ್ನು ಹೊಂದಿದ್ದು, ಅತ್ಯಂತ ಕಡಿಮೆ ಖರ್ಚಿನಲ್ಲಿ ಸರ್ಕಾರಿ ಸೌಲಭ್ಯಗಳೊಂದಿಗೆ ಜ್ಯೂನಿಯರ್ ಇಂಜಿನಿಯರ್ ಆಗುವ ಅವಕಾಶವನ್ನು ಹೊಂದಿದೆ.
ಡಿಪ್ಲೋಮಾ ವ್ಯಾಸಂಗ ಮುಗಿಸಿದವರು ನೇರವಾಗಿ ಉದ್ಯೋಗಕ್ಕೆ ಸೇರಬಹುದು, ಎರಡನೇ ವರ್ಷದ ಇಂಜಿನಿಯರಿಂಗ್ ಪ್ರವೇಶ ಪಡೆಯಬಹುದು. ಅಲ್ಲದೇ ಸರ್ಕಾರಿ ಆದೇಶದಂತೆ ಪಿಯುಸಿ ಸಮಾನಾಂತರ ಎಂದು ಪರಿಗಣಿಸುವುದರಿಂದ ಪಿಯುಸಿ ಮೇಲಿನ ಉದ್ಯೋಗಕ್ಕೂ ಸಹ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ www.dte.kar.nic, ಅಥವಾ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರು (ಮೊ.ಸಂ: 94814 09064), ಪ್ರವೇಶ ಸಂಯೋಜಕರನ್ನು (ಮೊ.ಸಂ: 86601 27509) ಸಂಪರ್ಕಿಸಬಹುದಾಗಿದೆ.