ಶಿರಸಿ: ಪ್ರಾನ್ಸ್ ನಲ್ಲಿ ನಡೆಯುತ್ತಿರುವ ವಿಶ್ವ ಮಕ್ಕಳ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಶಿರಸಿಯ ಪ್ರೇರಣಾ ನಂದಕುಮಾರ್ ಶೇಟ್ ಬ್ಯಾಂಡ್ಮಿಂಟನ್ ಕ್ರೀಡೆಯಲ್ಲಿ ಬಂಗಾರ ಪದಕ ಗೆದ್ದು, ದೇಶದ ಗರಿಮೆಯನ್ನು ಹೆಚ್ಚಿಸಿದ್ದಾಳೆ.
ಬ್ಯಾಡ್ಮಿಂಟನ್ ಪೈನಲ್ ನಲ್ಲಿ ಚೀನಾದ ಆಟಗಾರ್ತಿ ವಿರುದ್ಧ 3 ಸೆಟ್ ಗಳಲ್ಲಿ 13/21, 21/12, 21/16 ಅಂತರದಲ್ಲಿ ಮಣಿಸಿ ಬಂಗಾರದ ಪದಕ ಗೆದ್ದಿದ್ದಾಳೆ. ಇವಳು ಶಿರಸಿ ಲಯನ್ಸ್ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಇವಳ ಸಾಧನೆಗೆ ಪಾಲಕರು, ಶಾಲಾ ಶಿಕ್ಷಕರು, ಆಡಳಿತ ಮಂಡಳಿ ಶುಭಕೋರಿದ್ದಾರೆ.