• first
  second
  third
  previous arrow
  next arrow
 • ಇಂದಿನಿಂದ ಕವಲಕೊಪ್ಪದಲ್ಲಿ ‘ವಸಂತ ಯಕ್ಷೋತ್ಸವ- 2022’

  300x250 AD

  ಸಿದ್ದಾಪುರ: ತಾಲೂಕಿನ ಸಾಂಸ್ಕøತಿಕ ಸಂಘಟನೆಯಾದ ಇಟಗಿಯ ಕಲಾಭಾಸ್ಕರವು ಪ್ರತಿ ವರ್ಷದಂತೆ ಈ ವರ್ಷವೂ ಯಕ್ಷೋತ್ಸವವನ್ನು ಹಮ್ಮಿಕೊಂಡಿದೆ. ಕವಲಕೊಪ್ಪ ವಿನಾಯಕ ದೇವಾಲಯದ ಆವಾರದಲ್ಲಿ ಮೇ 21ರಿಂದ 24ರವರೆಗೆ ನಾಲ್ಕು ದಿನಗಳ ಕಾಲ ‘ವಸಂತ ಯಕ್ಷೋತ್ಸವ- 2022’ ಎಂಬ ಹೆಸರಿನಿಂದ ಯಕ್ಷಗಾನ ಉತ್ಸವವನ್ನು ಆಚರಿಸಲು ಸಜ್ಜಾಗಿದೆ.

  ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ನಡೆಯುವ ಈ ಉತ್ಸವವನ್ನು ಶನಿವಾರ ಸಂಜೆ 5.30ಕ್ಕೆ ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆಯವರು ಉದ್ಘಾಟಿಸಲಿದ್ದಾರೆ. ಫೇವಾರ್ಡ ಉತ್ತರ ಕನ್ನಡದ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡರವರು ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ನರೇಂದ್ರ ನಾಯಕ, ಶ್ರೀವಿನಾಯಕ ದೇವಾಲಯದ ಅಧ್ಯಕ್ಷ ಎಮ್.ಎಸ್.ಹೆಗಡೆ ಕವಲಕೊಪ್ಪ ಹಾಗೂ ಬಿದ್ರಕಾನ್ ಗ್ರಾ.ಪಂ.ನ ಅಧ್ಯಕ್ಷ ಎಮ್.ಬಿ.ಗೌಡ ಕೊಡಗಿಬೈಲು ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

  ನಂತರ ಸರಸ್ವತಿ ಕಲಾಬಳಗ ಹೊಸಗದ್ದೆಯವರು ಹಾಗೂ ಅತಿಥಿ ಕಲವಿದರು ನಡೆಸಿಕೊಡುವ ಕವಿ ನಂದಳಿಕೆ ಲಕ್ಷ್ಮೀನಾರಾಯಣಪ್ಪ (ಮುದ್ದಣ್ಣ) ವಿರಚಿತ ‘ರತ್ನಾವತಿ ಕಲ್ಯಾಣ’ ಎನ್ನುವ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇದೇ ವೇದಿಕೆಯು ಭಾನುವಾರ ಸಂಜೆ 5.30ಕ್ಕೆ ಸಹಕಾರೀ ರತ್ನ ಪ್ರಶಸ್ತಿ ಪುರಸ್ಕøತ ಆರ್.ಎಮ್.ಹೆಗಡೆ ಬಾಳೆಸರವರಿಗೆ ಅಭಿನಂದನಾ ಸಮಾರಂಭಕ್ಕೆ ತೆರೆದುಕೊಳ್ಳಲಿದೆ. ವಿಧಾನಸಭೆಯ ಅಧ್ಯಕ್ಷರೂ, ಕ್ಷೇತ್ರದ ಶಾಸಕರೂ ಆದ ಕಾಗೇರಿ ವಿಶ್ವೇಶ್ವರ ಹೆಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಸೇವಾ ಸಹಕಾರಿ ಸಂಘ ಬಿದ್ರಕಾನ್ ಅಧ್ಯಕ್ಷ ಪಿ.ಎಸ್.ಹೆಗಡೆ ಹಾಗೂ ಟಿ.ಎಸ್.ಎಸ್. ಶಿರ್ಸಿಯ ನಿರ್ದೇಶಕರಾದ ಆರ್.ಟಿ. ಹೆಗÀಡೆ ಅಳಗೋಡುರವರು ಅತಿಥಿಗಳಾಗಿ ಭಗವಹಿಸುತ್ತಾರೆ. ನಂತರ ಕವಿ ಕಂದಾವರ ರಘುರಾಮ ಶೆಟ್ಟಿ ವಿರಚಿತ ‘ವಸುವರಾಂಗಿ-ಗಂಗಾಂತರಂಗ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

  ನಾಟ್ಯಾಚಾರ್ಯ ಶಂಕರ ಭಟ್ಟ ಸಿದ್ದಾಪುರ, ಇಟಗಿ ಮಹಾಬಲೇಶ್ವರ ಭಟ್ಟ, ವಿನಯ ಭಟ್ಟ ಬೇರೊಳ್ಳಿ, ಮಾದನ್‍ಕಳ್ ವೆಂಕಟರಮಣ ಹೆಗಡೆ, ಜಯಕುಮಾರ ಮೆಣಸಿ, ದೀಪಕ ಕುಂಕಿ, ಪ್ರಸನ್ನ ಹೆಗಡೆ ಹೊಸಗದ್ದೆ, ಗಣಪತಿ ಹೆಗಡೆ ಹೊನ್ನೆಕೈ, ಗಣಪತಿ ಹೆಗಡೆ ಕೆರೆಗದ್ದೆ, ಭರತ ಗೌಡ ಗೋಳಿಕೈ, ಕು.ಅಭಯ ಹೆಗಡೆ, ಭೂಮಿಕಾ ಹೊಸಗದ್ದೆ, ಆದಿತ್ಯ ಹೆಗಡೆ ಹೊನ್ನೆಹದ್ದ, ಅಮಿತ ಮಾಣಿಕನ ಮನೆ, ಕು.ಪೃಥ್ವಿ ಜಿ ನಾಯ್ಕ ಹೊಸಗದ್ದೆ ಕಲಾವಿದರಾಗಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾಗವತರಾಗಿ ತುಳಿಗೇರೆ ಗಜಾನನ ಭಟ್ಟ, ಮದ್ದಳೆ ವಾದನದಲ್ಲಿ ನಾಗಭೂಷಣ ರಾವ್ ಕೇಡಲೇಸರ, ಚಂಡೆವಾದಕರಾಗಿ ಕೆ.ಎನ್.ಭಾರ್ಗವ ಸಾಗರ ಪಾಲ್ಗೊಳ್ಳಲಿದ್ದಾರೆ.

  300x250 AD

  23ರ ಸಂಜೆ 6.45ಕ್ಕೆ ಕವಿ ಅಂಬಾತನಯ ಮುದ್ರಾಡಿ ವಿರಚಿತ ‘ವರುಣ ಯಾಗ’ ಎನ್ನುವ ಯಕ್ಷಗಾನ ಪ್ರದರ್ಶನವು ರಂಗವೇರಲಿದೆ. ದಂಟಕಲ್ ಸತೀಶ ಹೆಗಡೆ, ಗುಡ್ಡೆದಿಂಬ ಮಂಜುನಾಥ ರಾವ್ ಹಾಗೂ ಸಂಪ ಲಕ್ಷ್ಮೀನಾರಾಯಣ ಹಿಮ್ಮೇಳ ಕಲಾವಿದರಾಗಿ ಕಥೆಯನ್ನು ನಡೆಸಲು ಸಹಕರಿಸಿದರೆ, ವಿವಿಧ ಪಾತ್ರವರ್ಗಗಳಲ್ಲಿ ಅಶೋಕ ಭಟ್ಟ ಸಿದ್ಧಾಪುರ, ಚಪ್ಪರಮನೆ ವೆಂಕಟಗಿರಿ ಹೆಗಡೆ, ಇಟಗಿ ಮಹಾಬಲೇಶ್ವರ, ನರೇಂದ್ರ ಹೆಗಡೆ ಅತ್ತಿಮರ್ಡು, ಪ್ರವೀಣ ತಟ್ಟೀಸರ, ಪ್ರಣವ ಭಟ್ಟ ಶಿರಳಗಿ ಹಾಗೂ ನಾಗಪತಿ ಹೆಗಡೆ ಕೊಪ್ಪ ಮುಂತಾದವರು ಭಾಗವಹಿಸಲಿದ್ದಾರೆ.

  ಈ ಸದಭಿರುಚಿಯ ಯಕ್ಷಗಾನ ಪ್ರದರ್ಶನಗಳಿಗೆ ತನು-ಮನ-ಧನಗಳೊಂದಿಗೆ ಸಹಕರಿಸಬೇಕೆಂದು ಕಲಾಭಾಸ್ಕರದ ಅಧ್ಯಕ್ಷ ಇಟಗಿ ಮಹಾಬಲೇಶ್ವರ ಹಾಗೂ ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಮೇ 24ರ ಸಂಜೆ 5.30ಕ್ಕೆ ಯಕ್ಷೋತ್ಸವದ ಸಮಾರೋಪ ಸಮಾರಂಭ ಸಂಪನ್ನಗೊಳ್ಳಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ಶ್ರೀ ಜಿ.ಎಲ್.ಹೆಗಡೆ ಕುಮಟಾ ಅವರು ವಹಿಸಿಕೊಳ್ಳಲಿದ್ದಾರೆ. ಹಿರಿಯ ಪತ್ರಕರ್ತ ನಾಗರಾಜ ಭಟ್ಟ ಕೆಕ್ಕಾರ್, ಸಾಮಾಜಿಕ ಮುಖಂಡ ಎನ್.ವಿ.ಹೆಗಡೆ ಮುತ್ತಿಗೆ ಹಾಗೂ ಬಿದ್ರಕಾನ್ ಗ್ರಾ.ಪಂ.ನ ಉಪಾಧ್ಯಕ್ಷೆ ಸರೋಜಾ ನಾಯ್ಕ ಹಾಸಣಗಿ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ನಂತರ ಕವಿ ಜಾನಕೈ ತಿಮ್ಮಪ್ಪ ಹೆಗಡೆ ವಿರಚಿತ ‘ರಾಜಾ ಸತ್ಯ ಹರಿಶ್ಚಂದ್ರ’ ಯಕ್ಷಗಾನ ಪ್ರದರ್ಶನವನ್ನು ಸಂಯೋಜಿಸಲಾಗಿದೆ. ಅನಂತ ಹೆಗಡೆ ದಂತಳಿಗೆಯವರು ಭಾಗವತರಾಗಿಯೂ, ಅನಂತಪದ್ಮನಾಭ ಫಾಟಕರು ಮದ್ದಳೆಯಲ್ಲಿಯೂ ಪ್ರಮೋದ ಕಬ್ಬಿನಗದ್ದೆ ಚಂಡೆವಾದನದಲ್ಲೂ ಕಾಣಿಸಿಕೊಳ್ಳಲಿದ್ಧಾರೆ. ವಿನಾಯಕ ಹೆಗಡೆ ಕಲ್ಲಗದ್ದೆ, ನೀಲ್ಕೋಡು ಶಂಕರ ಹೆಗಡೆ, ಸದಾಶಿವ ಭಟ್ಟ ಯಲ್ಲಾಪುರ, ಮುರೂರು ನಾಗೇಂದ್ರ ಭಟ್ಟ, ವೆಂಕಟೇಶ ಹೆಗಡೆ ಬೊಗರಿಮಕ್ಕಿ, ಕು. ತುಳಸಿ ಹೆಗಡೆ ಬೆಟ್ಟಕೊಪ್ಪ, ಇಟಗಿ ಮಹಾಬಲೇಶ್ವರ ಮುಂತಾದವರು ಪಾತ್ರಧಾರಿಗಳಾಗಿ ರಂಗವೇರಲಿದ್ದಾರೆ. ಈ ಎಲ್ಲ ಪ್ರದರ್ಶನಗಳಿಗೂ ವೇಷಭೂಷಣವನ್ನು ಎಮ್.ಆರ್.ನಾಯ್ಕ ಕರ್ಸೆಬೈಲು ಒದಗಿಸುತ್ತಾರೆ.

  Share This
  300x250 AD
  300x250 AD
  300x250 AD
  Back to top